ADVERTISEMENT

ಅ. 17ರಂದು ಕಾವೇರಿ ಪವಿತ್ರ ತೀರ್ಥೋದ್ಭವ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 0:37 IST
Last Updated 16 ಸೆಪ್ಟೆಂಬರ್ 2025, 0:37 IST
<div class="paragraphs"><p>ತೀರ್ಥೋದ್ಭವ ಸ್ಥಳದಲ್ಲಿ ಜನಸಂದಣಿ</p></div>

ತೀರ್ಥೋದ್ಭವ ಸ್ಥಳದಲ್ಲಿ ಜನಸಂದಣಿ

   

– ಪ್ರಜಾವಾಣಿ ಸಂಗ್ರಹ ವಿಡಿಯೊ

ಮಡಿಕೇರಿ: ತಾಲ್ಲೂಕಿನ ತಲಕಾವೇರಿಯಲ್ಲಿ ಅ.17ರಂದು ಮಧ್ಯಾಹ್ನ 1.44ಕ್ಕೆ ‘ಕಾವೇರಿ ಪವಿತ್ರ ತೀರ್ಥೋದ್ಭವ’ ನಡೆಯಲಿದೆ.

ADVERTISEMENT

ಇದಕ್ಕೂ ಮುನ್ನ ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲಿ ಸೆ. 26ರಂದು ಬೆಳಿಗ್ಗೆ 9.31ಕ್ಕೆ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ. 4ರಂದು ಬೆಳಿಗ್ಗೆ 8.33ಕ್ಕೆ ಆಜ್ಞಾ ಮುಹೂರ್ತ, ಅ. 14ರಂದು ಬೆಳಿಗ್ಗೆ 11.45ಕ್ಕೆ ಅಕ್ಷಯ ಪಾತ್ರೆ ಇರಿಸುವುದು, ಸಂಜೆ 4.45ಕ್ಕೆ ಕಾಣಿಕೆ ಡಬ್ಬಿ ಇಡುವ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ ಭಗಂಡೇಶ್ವರ–ತಲಕಾವೇರಿ ದೇವಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.