ADVERTISEMENT

ಕೊಡಗಿನ ಬಿದ್ದಂಡ ಸುರಕ್ಷಿತ ಮಿಸ್ ಮೈಸೂರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 13:08 IST
Last Updated 27 ಆಗಸ್ಟ್ 2023, 13:08 IST
ಮೈಸೂರಿನಲ್ಲಿ ಈಚೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನ ನಾಪೋಕ್ಲು ಬಳಿಯ ಕೋಕೇರಿಯ ಸುರಕ್ಷಿತ ಮಿಸ್ ಮೈಸೂರು ಕಿರೀಟ ಧರಿಸಿದರು
ಮೈಸೂರಿನಲ್ಲಿ ಈಚೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನ ನಾಪೋಕ್ಲು ಬಳಿಯ ಕೋಕೇರಿಯ ಸುರಕ್ಷಿತ ಮಿಸ್ ಮೈಸೂರು ಕಿರೀಟ ಧರಿಸಿದರು   

ನಾಪೋಕ್ಲು: ಮೈಸೂರಿನಲ್ಲಿ ಈಚೆಗೆ ನಡೆದ ಮಿಸ್ ಮೈಸೂರು ಫ್ಯಾಷನ್ ಸ್ಪರ್ಧೆಯಲ್ಲಿ ಕೊಡಗಿನ ಸುರಕ್ಷಿತ ಮಿಸ್ ಮೈಸೂರು ಕಿರೀಟ ಧರಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಈಚೆಗೆ ಎಸ್.ಎಸ್ ಕಲಾಸಂಗಮದ ವತಿಯಿಂದ ನಡೆದ ಮಿಸ್ ಮೈಸೂರು ಫ್ಯಾಷನ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿರುವ ಸುರಕ್ಷಿತ, ನಾಪೋಕ್ಲು ಬಳಿಯ ಚೆಯ್ಯಂಡಾಣೆಯ ಕೋಕೇರಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಹಾಗೂ ಸಿಂತಿಯ ಉತ್ತಪ್ಪ ಪುತ್ರಿ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 20 ಸ್ಪರ್ಧಿಗಳಲ್ಲಿ ಸಾಂಪ್ರದಾಯಿಕ ಸುತ್ತಿನಲ್ಲಿ ಕೊಡವ ಸೀರೆ ಧರಿಸಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.