ADVERTISEMENT

ಕೆಲವು ಗ್ರಾಮ ಪಂಚಾಯಿತಿಗಳ ಪುನರ್‌ರಚನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 8:45 IST
Last Updated 31 ಜನವರಿ 2026, 8:45 IST
   

ಮಡಿಕೇರಿ: ಕೊಡಗು ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳನ್ನು ಪುನರ್‌ ರಚಿಸಿರುವ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕರಡು ಅಧಿಸೂಚನೆ ಹೊರಡಿಸಿದ್ದಾರೆ.

ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಫೆ. 6ರ ಒಳಗೆ ಲಿಖಿತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಸವನಹಳ್ಳಿ, ರಸಲ್ ಪುರ, ಅತ್ತೂರು ಅರಣ್ಯ, ಅನೆಕಾಡು ಅರಣ್ಯ, ಬೈಚನಳ್ಳಿಗಳನ್ನು ಸೇರಿಸಲಾಗಿದೆ.

ADVERTISEMENT

ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಚೆಂಬೆಬೆಳ್ಳೂರು, ಕುಕ್ಲೂರು, ದೇವಣಗೇರಿ, ಐಮಂಗಲ, ಮಗ್ಗುಲ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಿಟ್ಟಂಗಾಲ, ಬಾಳುಗೋಡು, ನಾಂಗಾಲ, 1ನೇ ರುದ್ರಗುಪ‍್ಪೆ, ವಿ.ಬಾಗಡ, ಕೊಳತೋಡು ಬೈಗೋಡು ಗ್ರಾಮಗಳನ್ನು, ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬೇಟೋಳಿ, ಹೆಗ್ಗಳ ಗ್ರಾಮಗಳನ್ನು, ಆರ್ಜಿ ಗ್ರಾಮ ಪ‍ಂಚಾಯಿತಿ ವ್ಯಾಪ್ತಿಗೆ ಆರ್ಜಿ ಗ್ರಾಮ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕೆದಮುಳ್ಳೂರು, ಕೊಟ್ಟೋಳಿ, ಪಾಲಂಗಾಲ ಗ್ರಾಮಗಳನ್ನು, ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕದನೂರು, ಅರಮೇರಿ ಹಾಗೂ ಮೈತಾಡಿ ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ.

ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಾತೂರು, ಕೈಕೇರಿ, ಕುಂದ, ಬ‌ಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಲ್ಯಮಂಡೂರು ಮತ್ತು ಚಿಕ್ಕಮಂಡೂರು ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.