
ಮಡಿಕೇರಿ: ‘ಕೊಡಗಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಅನೇಕರಿಗೆ ಮನೆ ಭಾಗ್ಯವಿಲ್ಲ. ಆದರೆ, ಅಕ್ರಮ ಒತ್ತುವರಿ ಮಾಡಿಕೊಂಡಿದ್ದ ಜನತೆಗೆ ಸರ್ಕಾರ ಮನೆ ಭಾಗ್ಯ ನೀಡಿದೆ’ ಎಂದು ಬಿಜೆಪಿಯ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಖಂಡಿಸಿದ್ದಾರೆ.
ಕೊಡಗಿನಲ್ಲಿ ಈ ಹಿಂದೆ ನಡೆದ ಪ್ರಕೃತಿ ವಿಕೋಪದ ನೈಜ ನಿರಾಶ್ರಿತರಿಗೆ ಮನೆ ನೀಡದ ಕಾಂಗ್ರೆಸ್ ಸರ್ಕಾರ ಕೇರಳದ ಲಾಬಿಗೆ ಮಣಿದು ಅಕ್ರಮ ವಲಸಿಗರಿಗೆ ಮನೆ ನಿರ್ಮಿಸಲು ಹೊರಟಿದೆ. ಸರ್ಕಾರ ಅಕ್ರಮ ವಲಸಿಗ ಅಲ್ಪಸಂಖ್ಯಾತರ ಪರ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.
ಅಕ್ರಮ ವಲಸಿಗರ ಪರ ಕೇರಳ ಮತ್ತು ಕರ್ನಾಟಕದ ರಾಜ್ಯ ಸರ್ಕಾರಗಳು ಮೃದು ಧೋರಣೆ ತೋರುತಿರುದು ಕೂಡ ಖಂಡನಿಯ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.