ADVERTISEMENT

ಕೊಡವ ಸಾಹಿತ್ಯ ಅಕಾಡೆಮಿ 15 ಮಂದಿಗೆ ಗೌರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 22:30 IST
Last Updated 19 ಫೆಬ್ರುವರಿ 2026, 22:30 IST

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು 2026ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರದ 15 ಸಾಧಕರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

ಫೆ. 28ರಂದು ಬೆಳಿಗ್ಗೆ 10 ಗಂಟೆಗೆ ಕೊಡಗಿನ ಗಡಿ ಭಾಗ ಕುಟ್ಟ ಗ್ರಾಮದ ಕೊಡವ ಸಮಾಜದಲ್ಲಿ ನಡೆಯುವ ಸಾಹಿತ್ಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ, ‘ಕೊಡವ ಪುಸ್ತಕ ಪತ್ತಾಯ’ (ಗ್ರಂಥ ಭಂಡಾರ)ವನ್ನು ಕುಟ್ಟ ಕೊಡವ ಸಮಾಜದಲ್ಲಿ ತೆರೆಯಲಾಗುತ್ತದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ ಪ್ರಕಟಣೆ
ಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರು: ಮಲ್ಲೇಂಗಡ ದಾದ ಬೆಳ್ಯಪ್ಪ(ಸಮಾಜ ಸೇವೆ), ಚೆಪ್ಪುಡಿರ ತಿಲಕ್ ಸುಬ್ಬಯ್ಯ(ಸಮಾಜ-ಸಂಸ್ಕೃತಿ), ತೀತಮಾಡ ಅರ್ಜುನ್ ದೇವಯ್ಯ(ವ್ಯಕ್ತಿತ್ವ-ಸಮಾಜ ಕ್ಷೇತ್ರ), ಉದಿಯಂಡ ರೋಷನ್ ಸೋಮಣ್ಣ (ಸಾಹಿತ್ಯ-ಸಮಾಜ ಕ್ಷೇತ್ರ),  ಚೆನಿಯಪಂಡ ಮನು ಮಂದಣ್ಣ (ಸಾಹಿತ್ಯ-ಸಂಸ್ಕೃತಿ), ಚೊಟ್ಟೆಯಂಡ ಅಪ್ಪಾಜಿ (ಸಂಸ್ಕೃತಿ), ಕಣಿಯರ ನಾಣಯ್ಯ (ಜಾನಪದ), ನಡಿಕೇರಿಯಂಡ ವಿಕ್ರಂ ಅಪ್ಪಯ್ಯ (ಕಲೆ-ಸಂಸ್ಕೃತಿ), ಚಮ್ಮಣಮಡ ವಾಣಿ ರಾಘವೇಂದ್ರ (ಸಾಹಿತ್ಯ), ಕುಡಿಯರ
ಕೆ. ಚಿಣ್ಣಪ್ಪ (ಜಾನಪದ), ಸುಳ್ಳಿಮಡ ಗೌರಿ ನಂಜಪ್ಪ (ಜಾನಪದ), ಚೋಕಂಡ ಸಂಜು ಸುಬ್ಬಯ್ಯ (ಸಮಾಜ ಸೇವೆ), ಐಮಂಡ ರೂಪೇಶ್ ನಾಣಯ್ಯ (ಕಲಾ ಸೇವೆ), ಕಾಳೆಕುಟ್ಟಡ ಬೋಜಣ್ಣ (ಸಂಸ್ಕೃತಿ), ಕೊರಕುಟ್ಟಿರ ಸರ ಚಂಗಪ್ಪ (ಸಮಾಜಸೇವೆ).

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.