ADVERTISEMENT

ಸಿದ್ದಾಪುರ: ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕೆ.ಎಸ್ ಸುನಿಲ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 13:40 IST
Last Updated 6 ಜುಲೈ 2024, 13:40 IST
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.   

ಸಿದ್ದಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎಸ್. ಸುನಿಲ್ ಅಧಿಕಾರ ವಹಿಸಿಕೊಂಡರು.

ಸಂಸ್ಥೆ ಸಭಾಂಗಣದಲ್ಲಿ ಮಡಿಕೇರಿ ನಿರಂಜನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮಿತಾ ಅಯ್ಯಪ್ಪ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ಕುರಿಯನ್ ಜಾರ್ಜ್, ಖಜಾಂಚಿಯಾಗಿ  ಐ.ಪಿ ಕುಶಾಲಪ್ಪ, ಉಪಾಧ್ಯಕ್ಷರಾಗಿ ವಿದ್ಯಾ ದೇವಯ್ಯ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭ ಸ್ಥಾಪಕ ಸದಸ್ಯರಾದ ಕೆ.ಎಸ್.ರಾಮಸ್ವಾಮಿ, ತೊಡಂಬೈಲು ಮೋಹನ್, ಪಿ.ಎಂ.ನಂಜಪ್ಪ ಹಾಜರಿದ್ದರು.

ಇದೇ ಸಂದರ್ಭ ನಮಿತಾ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಥಾಮಸ್ ಮಾಥ್ಯು ಹಾಗೂ ಖಜಾಂಚಿ ಸುದಾ ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.