ಸೋಮವಾರಪೇಟೆ: ಸಕಲೇಶಪುರ ಡಿಪೋಗೆ ಸೇರಿದ ಕೆಎಸ್ಆರ್‌ಟಿಸಿ ಬಸ್ ಸೋಮವಾರ ಕೂತಿ–ತೋಳುರುಶೆಟ್ಟಳ್ಳಿ ಮಾರ್ಗದಲ್ಲಿ ಹಲವೆಡೆ ನಿಂತು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ.
ಹೆತ್ತೂರು– ವಣಗೂರು– ಕೂಡುರಸ್ತೆ ಮಾರ್ಗವಾಗಿ ಸೋಮವಾರಪೇಟೆಗೆ ಮಧ್ಯಾಹ್ನ 12 ಗಂಟೆಗೆ ತಲುಪಬೇಕಾದ ಬಸ್ ಏರು ರಸ್ತೆಯಲ್ಲಿ ಚಲಿಸದೆ, ಪ್ರಯಾಣಿಕರನ್ನು ಕೆಳಗಿಳಿಸಿ ನಂತರ ಮತ್ತೆ ಹತ್ತಿಸಿಕೊಂಡು ಸಾಗುವ ಪರಿಸ್ಥಿತಿ ಎದುರಾಗಿದ್ದು, ಸುಮಾರು ಒಂದು ಗಂಟೆ ತಡವಾಗಿ ಪಟ್ಟಣಕ್ಕೆ ತಲುಪಿತು.
ಪ್ರತಿದಿನ ಸಕಲೇಶಪುರ– ಸೋಮವಾರಪೇಟೆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳ ಪರಿಸ್ಥಿತಿ ಇದೆ ಆಗಿದ್ದು. ಈ ಮಾರ್ಗದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಯಾವ ಬಸ್‌ಗಳು ಸಹ ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ ಎಂದು ಕೊಮಾರಪ್ಪ ತಿಳಿಸಿದರು.
ಸಾರ್ವಜನಿಕರು ಸೋಮವಾರಪೇಟೆ ಸಂಚಾರಿ ನಿರೀಕ್ಷಕ ಹಾಗೂ ಬಸ್ ಚಾಲಕ ಮತ್ತು ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಹಳೆಯ ಬಸ್‌ಗಳನ್ನು ನಿಯೋಜಿಸುವುದರಿಂದ ನಿರಂತರ ತೊಂದರೆ ಎದುರಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಕಲೇಶಪುರ ಡಿಪೊ ವ್ಯವಸ್ಥಾಪಕರಿಗೆ ಸಮಸ್ಯೆ ತಿಳಿಸಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವನಜಾಕ್ಷಿ, ವಸಂತ್, ತಮ್ಮಯ್ಯ ದೂರಿದರು. ಸಂಬಂಧಿಸಿದ ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಿ ಹೊಸ ಬಸ್‌ಗಳನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.