ADVERTISEMENT

ಮಡಿಕೇರಿ: ರಾಜಹಂಸ ಬಸ್‌ ಪ‍್ರಯಾಣದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:12 IST
Last Updated 7 ಜನವರಿ 2026, 5:12 IST
   

ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವತಿಯಿಂದ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ಸೋಮವಾರಪೇಟೆಯಿಂದ ಬೆಂಗಳೂರು ಹಾಗೂ ಮೈಸೂರಿಗೆ ಹೊರಡುವ ರಾಜಹಂಸ ಹಾಗೂ ‘ನಾನ್ ಎಸಿ ಸ್ಲೀಪರ್’ ಮಾದರಿಯ ಸಾರಿಗೆಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ತಿಳಿಸಿದ್ದಾರೆ.

ಕುಶಾಲನಗರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಪ್ರಯಾಣದರವನ್ನು ₹ 780ರಿಂದ ₹ 700, ರಾಜಹಂಸ ಪ್ರಯಾಣ ದರ ₹ 680ರಿಂದ ₹550, ವಿರಾಜಪೇಟೆ-ಬೆಂಗಳೂರು ರಾಜಹಂಸ ₹ 620ರಿಂದ ₹ 550, ಗೋಣಿಕೊಪ್ಪಲು-ಬೆಂಗಳೂರು ರಾಜಹಂಸ ₹ 620ರಿಂದ ₹550, ಸೋಮವಾರಪೇಟೆ-ಬೆಂಗಳೂರು ರಾಜಹಂಸ ₹ 630ರಿಂದ ₹ 550, ಮಡಿಕೇರಿ-ಮೈಸೂರು ಮಾರ್ಗ ನಾನ್ ಎಸಿ ಸ್ಲೀಪರ್ ₹ 570ರಿಂದ ₹450, ರಾಜಹಂಸ ₹ 430ರಿಂದ ₹ 280ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT