ಕುಶಾಲನಗರ: ಸಮೀಪದ ಕೂಡಿಗೆ ವ್ಯಾಪ್ತಿಯ ಮಡಿಕೇರಿ- ಹಾಸನ ಹೆದ್ದಾರಿಯಲ್ಲಿ ಉಂಟಾದ ಗುಂಡಿ ಮುಚ್ಚುವ ಕಾರ್ಯ ಆರಂಭಗೊಂಡಿದೆ.
ಕೂಡಿಗೆ- ಕುಶಾಲನಗರದವರೆಗೆ ಹೆದ್ದಾರಿಯ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣಗೊಂಡು ಮಳೆ ನೀರು ತುಂಬಿತ್ತು. ಇದರಿಂದ ವಾಹನ ಚಾಲಕರಿಗೆ ತೊಂದರೆ ಉಂಟಾಗಿತ್ತು. ಕೆಲವು ವೇಳೆ ಬೈಕ್ ಸವಾರರು ಬಿದ್ದು ಕೈಕಾಲುಗಳಿಗೆ ಪೆಟ್ಟು ಬಿದ್ದ ಘಟನೆಗಳು ನಡೆದಿದ್ದವು. ಇದೀಗ ಲೋಕೋಪಯೋಗಿ ಇಲಾಖೆ ವತಿಯಿಂದ ಬಿ.ಎಸ್.ಆರ್. ಸಂಸ್ಥೆಯ ಮೂಲಕ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗಿದೆ. ಕೂಡಿಗೆಯಿಂದ ಕುಶಾಲನಗರದ ವರೆಗೆ 6 ಕಿಲೋ ಮೀಟರ್ ಕಾಂಕ್ರೀಟ್ ಮಿಶ್ರಿಣವನ್ನು ಹಾಕಿ ರಸ್ತೆಯ ಗುಂಡಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.