
ಕುಶಾಲನಗರ: ಕೂಡಿಗೆ ಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಸಂಘದ ಒಂಭತ್ತು ನಿರ್ದೇಶಕರ ಸ್ಥಾನಕ್ಕೆ 15 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. 40 ಸದಸ್ಯ ಮತದಾರರು ಮತದಾನದಲ್ಲಿ ಭಾಗವಹಿಸಿದರು.
ಸಾಮಾನ್ಯ ಕ್ಷೇತ್ರದಿಂದ ಮಮತ, ಪವಿತ್ರ, ರತ್ನ, ಜ್ಯೋತಿ, ಕಮಲ, ರತ್ನ, ರೇಣುಕಾ, ಮಂದಾಕಿನಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಲತಾ ಲಾಟರಿ ಮೂಲಕ ಜಯಗಳಿಸಿದರು.
ಬಿಸಿಎಂಎ ಕ್ಷೇತ್ರದಿಂದ ಜಯಶ್ರೀ ಮತ್ತು ಎಸ್‌ಟಿ ಮೀಸಲು ಕ್ಷೇತ್ರದ ವಿಭಾಗದಿಂದ ಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪ್ರದೀಪ್ ತಿಳಿಸಿದ್ದಾರೆ. ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯದರ್ಶಿ ಸುಮಾ ಕಾರ್ಯ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.