ADVERTISEMENT

ಕುಶಾಲನಗರ | ಮಳೆಯಲ್ಲೂ ವಾಲಿಬಾಲ್ ಪಂದ್ಯಾವಳಿ

ಕೊಡಗು ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 15:28 IST
Last Updated 25 ಮೇ 2025, 15:28 IST
ಕುಶಾಲನಗರ ಸಮೀಪದ ಸಿದ್ದಲಿಂಗಪುರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಳಂಜನ ಸುಗು ಪ್ರೆಂಡ್ಸ್ ಹಾಗೂ ಎಸ್.ಎಸ್.ಎಂ. ರೈಸಿಂಗ್ ತಂಡಗಳ ನಡುವೆ ಭಾನುವಾರ ವಾಲಿಬಾಲ್ ಪಂದ್ಯಾಟ ನಡೆಯಿತು
ಕುಶಾಲನಗರ ಸಮೀಪದ ಸಿದ್ದಲಿಂಗಪುರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಳಂಜನ ಸುಗು ಪ್ರೆಂಡ್ಸ್ ಹಾಗೂ ಎಸ್.ಎಸ್.ಎಂ. ರೈಸಿಂಗ್ ತಂಡಗಳ ನಡುವೆ ಭಾನುವಾರ ವಾಲಿಬಾಲ್ ಪಂದ್ಯಾಟ ನಡೆಯಿತು    

ಕುಶಾಲನಗರ:  ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಶಿನಗುಪ್ಪೆ ಗ್ರಾಮದ ಕೊಡಗು ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ  ಯಿಂದ ಭಾನುವಾರ ವಾಲಿಬಾಲ್ ಕ್ರೀಡಾಕೂಟ ನಡೆಯಿತು.

ಸಿದ್ದಲಿಂಗಪುರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಳೆಯಲ್ಲೇ ನಡೆದ ಕ್ರೀಡಾಕೂಟದಲ್ಲಿ 10 ಕುಟುಂಬ 18 ಗೋತ್ರದ ಗೌಡ ಕುಟುಂಬಗಳ ನಡುವಿನ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಪ್ರೇಕ್ಷಕರ ಗಮನ ಸೆಳೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ನಿರಂತರ ಮಳೆಯಲ್ಲೇ ಕ್ರೀಡಾಪಳುಗಳು ವಾಲಿಬಾಲ್‌ ಪಂದ್ಯಾಟದಲ್ಲಿ ಪಾಲ್ಗೊಂಡರು.

ಉದ್ಯಮಿ ನಾಪಂಡ ಮುತ್ತಪ್ಪ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ಪರಸ್ಪರ ಸ್ನೇಹ ಹಾಗೂ ಸಾಹಾರ್ದದ ಹೆಗ್ಗುರುತಾಗಿವೆ. ಸೋಲು ಗೆಲುವನ್ನು ಕ್ರೀಡಾ ಪಟುಗಳು ಸಮಾನವಾಗಿ ತೆಗೆದುಕೊಳ್ಳಬೇಕು ಎಂದರು.
ಸ್ಪೋರ್ಟ್ಸ್ ಅಕಾಡೆಮಿಯ ಪ್ರಮುಖರಾದ ಕಳಂಜನ ಉದಯಕುಮಾರ್, ಕೂಡಕಂಡಿ ದರ್ಶನ್, ಕೊರಂಬಡ್ಕ ನಂದಾ, ಪೊನ್ನಚ್ಚನ ಲವೀನ್, ತೊರೆನೂರು ಗ್ರಾಪಂ ಸದಸ್ಯರಾದ ನಿರ್ವಾಣಿ ಪ್ರಕಾಶ್ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.