
ಕುಶಾಲನಗರ : ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಜ. 25 ರಂದು ಪಟ್ಟಣದಲ್ಲಿ ಕರೋಕೆ ಗಾಯನ ಸ್ವರ ಸಂಭ್ರಮ ಸೀಸನ್-1 ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾಧ್ಯಕ್ಷೆ ನಯನ ಹರಿಶ್ಚಂದ್ರ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಹಾರಂಗಿ ರಸ್ತೆಯ ವಾಲ್ಮೀಕಿ ಭವನದಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದೆ. 25 ಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ.
ಶಾಸಕ ಡಾ.ಮಂತರ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾನೂನು ಸಲಹೆಗಾರ ಕೆ.ಎಸ್. ಚಂದ್ರಶೇಖರ್, ನಿವೃತ್ತ ಭೂಮಾಪಕ ಅಧಿಕಾರಿ ಹರೀಶ್ ಚಂದ್ರ ಬಿದ್ರುಪಣೆ, ಉದ್ಯಮಿಗಳಾದ ಬಿ.ಜಿ.ರಾಜೇಶ್, ರಾಬಿನ್ ಪೀಟರ್, ಕಾಫಿ ಪ್ಲಾಂಟರ್ ಪೋತಂಡ್ರ ತೇಜಪ್ರಸಾದ್, ಎಂಜಿನಿಯರ್ ಟಿ.ಎ. ಯೂಸಫ್ ಅತಿಥಿಗಳಾಗಿರುವುರ ಎಂದು ತಿಳಿಸಿದರು.
ಪರಿಷತ್ತಿನ ಕೊಡಗು ಜಿಲ್ಲಾ ಕಾರ್ಯದರ್ಶಿ ಹರಿಣಿ ಪ್ರಭಾಕರ್ ಮಾತನಾಡಿ, ಜಿಲ್ಲೆಯಲ್ಲಿ ಪರಿಷತ್ ಸೌಂದರ್ಯ ಸ್ಪರ್ಧೆ ನಡೆಸಿತ್ತು. ಪ್ರಥಮವಾಗಿ ಕರೋಕೆ ಗಾಯನ ಹಮ್ಮಿಕೊಳ್ಳಲಾಗಿದೆ. ಪಾಲ್ಗೊಳ್ಳುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷೆ ಮೌಲ್ಯ ಜಯ ಕುಮಾರ್ ಮಾತನಾಡಿ, ಹಾಡುಗಾರರು, ಸಂಗೀತ ಪ್ರಿಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಂಡರು. ಹೆಚ್ಚಿನ ಮಾಹಿತಿಗೆ 9448201227, 9342845120, 8867688676 ಸಂಪರ್ಕಿಸಲು ಕೋರಿದ್ದಾರೆ. ಮೈಸೂರು ಜಿಲ್ಲಾ ಕಾರ್ಯದರ್ಶಿ ರಂಜನಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.