ಗೋಣಿಕೊಪ್ಪಲು: ವೀರಾಜಪೇಟೆ ಲಯನ್ಸ್ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.
ವೀರಾಜಪೇಟೆ ಲಯನ್ಸ್ ಸಂಸ್ಥೆಯನ್ನು 1975ರಲ್ಲಿ ಸ್ಥಾಪನೆ ಮಾಡಲಾಗಿದೆ. ಇದರ ಅಂಗವಾಗಿ ಆಯೋಜಿಸುವ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಅಂಬಿ ಕೃಷ್ಣಮೂರ್ತಿ ಮನವಿ ಮಾಡಿದರು.
ಲಯನ್ಸ್ 317–ಡಿ ಡೆಪ್ಯುಟಿ ಗವರ್ನರ್ ಗೋವರ್ಧನ್ ಕೆ.ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪದವಿ ವ್ಯಾಸಂಗದಲ್ಲಿ ಉತ್ತಮ ಸಾಧನೆ ಮಾಡಿದ ಕೆ.ಎ.ಅಯೇಷಾ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಬಿ.ಪಿ.ಗಣಪತಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ನಿಕಟಪೂರ್ವ ಕಾರ್ಯದರ್ಶಿ ಪಿ.ಟಿ.ನರೇಂದ್ರ ಮತ್ತು ಖಜಾಂಚಿ ಕೆ.ಯು.ಜಯ, ಮುಖಂಡರಾದ ಸುಪ್ರಿತಾ ಗೋವರ್ಧನ್ ಶೆಟ್ಟಿ, ಲಯನ್ಸ್ ಸಂಸ್ಥೆಯ ಪ್ರಮುಖರಾದ ಡಾ.ಪಂಚಮ್ ತಿಮ್ಮಯ್ಯ, ಬಿಂದು ಗಣಪತಿ, ನೂತನ ಸಾಲಿನ ಕಾರ್ಯದರ್ಶಿ ಪೌಲ್ ಕ್ಷೇವಿಯರ್, ಖಜಾಂಚಿ ಮಂಡೇಟಿರ ಎಂ.ಸುರೇಶ್ ಮತ್ತು ಪದಾಧಿಕಾರಿಗಳು ಹಾಜರಿದ್ದರು.
ನಾಟಿ ಓಟ ಸ್ಪರ್ಧೆ: ವೀರಾಜಪೇಟೆ ನೂತನ ಲಯನ್ಸ್ ಸಂಸ್ಥೆ ವತಿಯಿಂದ ಜು.22ರಂದು ನಾಟಿ ಓಟದ ಸ್ಪರ್ಧೆಯನ್ನು ಬಿಟ್ಟಂಗಾಲ ಆರ್.ಕೆ.ಫಾರಂ ನಲ್ಲಿ ಸಾರ್ವಜನಿಕರಿಗೆ ಆಯೋಜಿಸಿರುವುದಾಗಿ ಪೌಲ್ ಕ್ಷೇವಿಯರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.