ಮಡಿಕೇರಿ: ಮಡಿಕೇರಿ ದಸರಾ ಉತ್ಸವವು ಸೆ.26 ರಿಂದ ಆರಂಭವಾಗಲಿದೆ.
26ರಂದು 4 ಶಕ್ತಿ ದೇವತೆಗಳ ಕರಗದ ಮೆರವಣಿಗೆ ಆರಂಭವಾಗಲಿದೆ. 27 ಮತ್ತು 28 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು, 29 ರಂದು ಕ್ರೀಡಾ ದಸರಾ, 30 ರಂದು ಮಹಿಳಾ ದಸರಾ, ಅ.1 ರಂದು ಯುವ ದಸರೆ, 2ರಂದು ಜನಪದ ದಸರೆ, 3 ರಂದು ಮಕ್ಕಳ ದಸರೆ, 4 ರಂದು ಕವಿಗೋಷ್ಠಿ, 5 ರಂದು ದಶಮಂಟಪಗಳ ಶೋಭಾಯಾತ್ರೆ ನಡೆಯಲಿದೆ. 6 ರಂದು ಬೆಳಿಗ್ಗೆ ಬನ್ನಿ ಕಡಿಯುವ ಮೂಲಕ ದಸರಾ ಉತ್ಸವಕ್ಕೆ ತೆರೆಯಲಾಗುತ್ತದೆ.
ಈ ಕಾರ್ಯಕ್ರಮಗಳಿಗೆ ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದ ಸಭೆ ಸಮ್ಮತಿ ನೀಡಿತು. ₹ 1.36 ಕೋಟಿ ಖರ್ಚಾಗಲಿದ್ದು ಸದ್ಯ ₹1 ಕೋಟಿ ಬಿಡುಗಡೆಯಾಗಿದೆ. ಉಳಿಕೆ ಮೊತ್ತವನ್ನೂ ಬಿಡುಗಡೆ ಮಾಡಲಾಗುವುದು ಎಂದು ಸಚಿವ ನಾಗೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.