ಮಡಿಕೇರಿ: ನಗರದ ಮಾರುಕಟ್ಟೆ, ರಾಣಿಪೇಟೆ, ಮುತ್ತಪ್ಪ ದೇವಸ್ಥಾನದ ರಸ್ತೆಯಲ್ಲಿ ಅಶುಚಿತ್ವ ಹೆಚ್ಚಿದೆ. ಅದರಲ್ಲೂ ಮಾರುಕಟ್ಟೆಯ ಹಿಂಭಾಗ, ರಾಣಿ ಪೇಟೆ, ಹಿಲ್ ರಸ್ತೆಯಲ್ಲಿ ಕಸ ಎಲ್ಲೆಂದರಲ್ಲಿ ಬಿದ್ದಿದೆ.
ಸುರಿಯುತ್ತಿರುವ ಮಳೆಯಿಂದ ಈ ಕಸವೆಲ್ಲವೂ ಕೊಳೆತು ನಾರುತ್ತಿದೆ. ನಗರಸಭೆಯು ಕಸ ಹಾಕಬಾರದು ಎಂದು ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೂ, ಹಲವೆಡೆ ಇದು ಯಶಸ್ವಿಯಾಗಿಲ್ಲ. ಕನಿಷ್ಠ ಪಕ್ಷ ನಿತ್ಯ ಒಮ್ಮೆಯಾದರೂ ಬಿದ್ದಿರುವ ಕಸವನ್ನು ತೆಗೆಯುವ ಕೆಲಸ ಮಾಡಬೇಕಿದೆ.
ಇ–ತ್ಯಾಜ್ಯ ಹಾಕಲು ಇಡಲಾದ ಡಬ್ಬದ ಮುಂದೆ ‘ಈ ಸ್ಥಳವು ಸಿಸಿಟಿವಿ ಕಣ್ಗಾವಲಿನಲ್ಲಿದೆ. ಇಲ್ಲಿ ಕಸ ಹಾಕುವುದನ್ನು ನಿಷೇಧಿಸಲಾಗಿದೆ’ ಎಂಬ ಎಚ್ಚರಿಕೆ ಸಂದೇಶ ಇರುವ ಫಲಕ ಮುಂದೆಯೇ ರಾಶಿ ರಾಶಿ ಕಸ ಬಿದ್ದಿರುವ ದೃಶ್ಯ ಬುಧವಾರ ಸಂಜೆ ಕಂಡು ಬಂತು. ಈ ದೃಶ್ಯ ನಗರಸಭೆಯ ಕಾರ್ಯಕ್ಕೆ ಕನ್ನಡಿ ಹಿಡಿದಂತಿತ್ತು.
ಮಮತಾ, ಸ್ಥಳೀಯ ನಿವಾಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.