ADVERTISEMENT

ಮಡಿಕೇರಿ | ಮಲತ್ಯಾಜ್ಯ ನಿರ್ವಹಣ ಘಟಕ ಶುರು

ಮಡಿಕೇರಿಯಲ್ಲಿ ವಾಹನಗಳಿಗೆ ಹಸಿರು ನಿಶಾನೆ ತೋರಿದ ಸಚಿವ ಎನ್.ಎಸ್.ಭೋಸರಾಜು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:18 IST
Last Updated 16 ಆಗಸ್ಟ್ 2025, 7:18 IST
ಕೊಡಗಿನಲ್ಲಿ ಕಾರ್ಯಾರಂಭ ಮಾಡಿದ ಸಂಚಾರಿ ಮಲತ್ಯಾಜ್ಯ ನಿರ್ವಹಣಾ ಘಟಕದ ಎದುರು ಅಧಿಕಾರಿಗಳು ಇದ್ದಾರೆ
ಕೊಡಗಿನಲ್ಲಿ ಕಾರ್ಯಾರಂಭ ಮಾಡಿದ ಸಂಚಾರಿ ಮಲತ್ಯಾಜ್ಯ ನಿರ್ವಹಣಾ ಘಟಕದ ಎದುರು ಅಧಿಕಾರಿಗಳು ಇದ್ದಾರೆ   

ಮಡಿಕೇರಿ: ಸಂಚಾರಿ ಮಲತ್ಯಾಜ್ಯ ನಿರ್ವಹಣಾ ಘಟಕ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಕಾರ್ಯಾರಂಭ ಮಾಡಿತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಕೋಶ್ ಟ್ರಸ್ಟ್, ಸ್ವಚ್ಛ ಭಾರತ ಮಿಷನ್ ಗ್ರಾಮಾಂತರ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿಯ ವತಿಯಿಂದ ಇಲ್ಲಿನ ಐತಿಹಾಸಿಕ ಕೋಟೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಈ ಘಟಕಗಳಿಗೆ ಚಾಲನೆ ನೀಡಿದರು.

ಏನಿದು ಘಟಕ?

ADVERTISEMENT

ಸಂಚಾರಿ ಮಲತ್ಯಾಜ್ಯ ನಿರ್ವಹಣಾ ಘಟಕದ 3 ವಾಹನಗಳು ಈಗ ಕೊಡಗಿನಲ್ಲಿ ಕಾರ್ಯಾರಂಭ ಮಾಡಿವೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ, ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮ ಪಂಚಾಯಿತಿ, ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪಂಚಾಯಿತಿ ವ್ಯಾಪ್ತಿಯಲ್ಲಿ ಇವು ಕಾರ್ಯಾಚರಣೆ ನಡೆಸಲಿವೆ.

ಈ ವಾಹನಗಳು ಮನೆಮನೆಗೆ ಹೋಗಿ ಮಲತ್ಯಾಜ್ಯವನ್ನು ಸಕ್ಕಿಂಗ್ ಮಾಡಿ ವಾಹನದಲ್ಲೇ ಫಿಲ್ಟರ್ ಮಾಡಲಾಗುತ್ತದೆ. ಫಿಲ್ಟರ್‌ ಮಾಡಿದ ನಂತರ ಬರುವ ನೀರನ್ನು ನೇರವಾಗಿ ಚರಂಡಿಗೆ ಹರಿಸಬಹುದು, ವಾಹನ ತೊಳೆಯಲು, ಗಿಡಗಳಿಗೆ ಹಾಕಲು ಬಳಸಬಹುದು. ಬರುವ ಘನ ತ್ಯಾಜ್ಯವನ್ನು ಒಣಗಿಸಿದರೆ ಅದು ಗೊಬ್ಬರವಾಗುತ್ತದೆ.

ಬೆಂಗಳೂರಿನ ಶ್ರೀವರಿ ಎಂಟರ್‌ ಪ್ರೈಸೈಸ್‌ನವರು ಇದಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಸರಬರಾಜು ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್‌ ಪ್ರಕಾಶ್ ಮೀನಾ, ಜಿಲ್ಲಾ ಯೋಜನಾ ವ್ಯವಸ್ಥಾಪಕ ಪುಟ್ಟಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್, ಸಹಾಯಕ ಶ್ಯಾಂ, ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಜೀವನ್‌ಕುಮಾರ್, ಮಡಿಕೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಭಾಗವಹಿಸಿದ್ದರು.

ಕೊಡಗಿನಲ್ಲಿ ಕಾರ್ಯಾರಂಭ ಮಾಡಿದ ಸಂಚಾರಿ ಮಲತ್ಯಾಜ್ಯ ನಿರ್ವಹಣಾ ಘಟಕ

ಕೊಡಗಿನಲ್ಲಿ 3 ಪಂಚಾಯಿತಿಗೆ ಸಂಚಾರಿ ಮಲತ್ಯಾಜ್ಯ ನಿರ್ವಹಣಾ ಘಟಕ ಮನೆಯ ಸಮೀಪವೇ ತ್ಯಾಜ್ಯ ವಿಲೇವಾರಿ ಪ್ರಾಯೋಗಿಕ ಯೋಜನೆ ಜಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.