
ನಾಪೋಕ್ಲು: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ವತಿಯಿಂದ 171ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಇಗ್ಗುತ್ತಪ್ಪ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಹಿಂದೂ ಮಲಯಾಳಿ ಸಂಘ- ಕಾರ್ಗಿಲ್ ಕೊಡಗು ದ್ವಿತೀಯ ಸ್ಥಾನ ಪಡೆದುಕೊಂಡಿತು. ಇಗ್ಗುತ್ತಪ್ಪ ತಂಡಕ್ಕೆ ವಿಜೇತರಿಗೆ ₹30,000 ನಗದು ಹಾಗೂ ಟ್ರೋಫಿ ಹಿಂದೂ ಮಲಯಾಳಿ ಸಂಘ- ಕಾರ್ಗಿಲ್ ಕೊಡಗು ತಂಡಕ್ಕೆ ದ್ವಿತೀಯ ಬಹುಮಾನ ₹15,000 ನೀಡಲಾಯಿತು.
ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಭಾಜನವಾದ ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ತಂಡಕ್ಕೆ ₹30,000 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಬಲಮುರಿಯ ಮಹದೇವ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ₹15,000 ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಸ್ಥಾನವನ್ನು ಸಿದ್ದಾಪುರದ ಗ್ಯಾಲಕ್ಸಿ ನಲ್ವತೆಕ್ಕರೆ ತಂಡ ಮುಡಿಗೇರಿಸಿಕೊಂರೆ ಹಾಕತ್ತೂರಿನ ಅಟ್ಯಾಕ್ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳಿಗೆ ಕ್ರಮವಾಗಿ ₹33,333 ನಗದು ಮತ್ತು ಆಕರ್ಷಕ ಟ್ರೋಫಿ ರನ್ನರ್ ಅಪ್ ತಂಡಕ್ಕೆ ₹15,555 ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ಕೊಂಡಂಗೇರಿ ಹಾಗೂ ಅಯ್ಯಂಗೇರಿ ಫ್ರೆಂಡ್ಸ್ ತಂಡಗಳು ತೃತೀಯ ಸ್ಥಾಣವ ಪಡೆದುಕೊಂಡವು.
ನಾಪೋಕ್ಲುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 5 ದಿನಗಳು ಕ್ರೀಡಾಕೂಟ ನಡೆದವು. ಭಾನುವಾರ ನಡೆದ ಪುರುಷರ ಅಂತಿಮ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಗಣ್ಯರು ಉದ್ಘಾಟಿಸಿದರು.
ಕ್ರಿಕೆಟ್ ಟೂರ್ನಿಯಲ್ಲಿ ಚಿಂಚು ನಲ್ವತೆಕ್ಕರೆ ಸರಣಿ ಶ್ರೇಷ್ಠ, ಸಾಹುಲ್ ನಲ್ವತೆಕ್ಕರೆ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ರಫೀಕ್ ಹಾಕತ್ತೂರು ಪಡೆದುಕೊಂಡರು. ಎಸ್ಎನ್‌ಡಿಪಿ ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಅಧ್ಯಕ್ಷ ವಿ.ಕೆ.ಲೋಕೇಶ್,ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ ಲವ, ಉಪಾಧ್ಯಕ್ಷ ಹರಿದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಜಮಾಯತ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್, ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಚಂದ್ರನ್, ಜೆಡಿಎಸ್ ವಕ್ತಾರ ಮನ್ಸೂರು ಆಲಿ, ಕಾಫಿ ಬೆಳೆಗಾರ ಕೋಡಿಮಣಿಯಂಡ ಶರಣು ಕುಟ್ಟಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ಕಾಫಿ ಬೆಳೆಗಾರ ಅರೆಯಡ ರತ್ನ ಪೆಮ್ಮಯ್ಯ, ಆಚರಣಾ ಸಮಿತಿ ಉಪಾಧ್ಯಕ್ಷ ತಂಗ, ಸುರೇಶ್, ಕಾರ್ಯದರ್ಶಿ ಪಿ.ಸಿ.ಕಿಶೋರ್ , ಸಹ ಕಾರ್ಯದರ್ಶಿ ಅಜಿತ್ ಎಂ.ಆರ್, ಆಚರಣಾ ಸಮಿತಿ ಉಪಾಧ್ಯಕ್ಷ ಸತೀಶ್ ಟಿ.ಕೆ, ಎಂ.ಕೆ. ಹರೀಶ್ ಟಿ.ಸಿ, ಮಣಿ ಟಿ.ಸಿ. ಹರೀಶ್ ಕುಮಾರ್, ಪಿ ಆಚರಣಾ ಸಮಿತಿ ಉಪಾಧ್ಯಕ್ಷ ಸತೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.