
ಪ್ರಜಾವಾಣಿ ವಾರ್ತೆ
ಕೊಡಗು ಜಿಲ್ಲೆಗೆ ಆಗಮಿಸಿದ ಎನ್‌ಡಿಎಆರ್‌ಎಫ್ ತಂಡ
ಮಡಿಕೇರಿ: ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಶನಿವಾರ ಜಿಲ್ಲೆಗೆ ಆಗಮಿಸಿತು.
ಬೆಂಗಳೂರಿನಲ್ಲಿರುವ ಎನ್‌ಡಿಆರ್‌ಎಫ್‌ನ ರೀಜನಲ್ ರೆಸ್ಪಾನ್ಸ್ ಸೆಂಟರ್‌ನ 10ನೇ ಬೆಟಾಲಿಯನ್‌ನಲ್ಲಿರುವ 25 ಮಂದಿ ಯೋಧರು ಇನ್‌ಸ್ಪೆಕ್ಟರ್ ಅಜಯ್ ಅವರ ನೇತೃತ್ವದಲ್ಲಿ ಇಲ್ಲಿನ ಕುಶಾಲನಗರಕ್ಕೆ ತಮ್ಮದೇ ಬಸ್‌ನಲ್ಲಿ ಬಂದರು. ಅವರನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಸ್ವಾಗತಿಸಿದರು.
ಮುಂಗಾರು ಮುಗಿಯುವವರೆಗೂ ಈ ತಂಡವು ಜಿಲ್ಲೆಯಲ್ಲೇ ಇರಲಿದ್ದು, ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.