ಕಡತ
(ಸಾಂದರ್ಭಿಕ ಚಿತ್ರ)
ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಮಡಿಕೇರಿ ದಸರೆಯಲ್ಲಿ ಗುರುವಾರ ದಸರಾ ಬಹುಭಾಷಾ ಕವಿಗೋಷ್ಠಿಯು 13 ಭಾಷೆಗಳ 71 ಕವಿಗಳ ಕವನ ವಾಚನಕ್ಕೆ ಸಾಕ್ಷಿಯಾಯಿತು.
ಕನ್ನಡ, ಇಂಗ್ಲಿಷ್, ಹಿಂದಿ, ಕೊಡವ, ಅರೆಭಾಷೆ, ತುಳು, ಕುಂಬಾರ, ಯರವ, ಹವ್ಯಕ, ಬೈರಬಾಸೆ, ಬ್ಯಾರಿ, ಮಲಯಾಳಂ, ಜೇನು ಕುರುಬ ಭಾಷೆಗಳಲ್ಲಿ ಕವನ ವಾಚನ ನಡೆಯಿತು. ಮಕ್ಕಳೂ ಕವನ ವಾಚಿಸಿದರು. ರಿಹಾನಾ ಎಂಬ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ಕವನ ವಾಚಿಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.