ADVERTISEMENT

ಗುಂಡೇಟು ಪ್ರಕರಣ: ಆರೋಪಿ ಬಂಧನ

ಕಾಂಡನಕೊಲ್ಲಿ ಗ್ರಾಮದಲ್ಲಿ ನಡೆದಿದ್ದ ಕೊಲೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 6:59 IST
Last Updated 24 ಅಕ್ಟೋಬರ್ 2018, 6:59 IST

ಮಡಿಕೇರಿ: ತಾಲ್ಲೂಕಿನ ಕಾಂಡನಕೊಲ್ಲಿ ಗ್ರಾಮದಲ್ಲಿ ಕಾಡುಪ್ರಾಣಿ ಬೇಟೆ ವೇಳೆ ನಡೆದಿದ್ದ ಗುಂಡೇಟು ಪ್ರಕರಣದ ಪ್ರಮುಖ ಆರೋಪಿಯನ್ನು ಡಿಸಿಐಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವೆಸ್ಟ್‌ನೆಮ್ಮಾಲೆ ಗ್ರಾಮದ ಕಾಳೀಮಾಡ ದಿನೇಶ್‌ ದೇವಯ್ಯ (45) ಬಂಧಿತ ಆರೋಪಿ.

ಅ. 18ರಂದು ದಿನೇಶ್ ದೇವಯ್ಯ, ಹೆಮ್ಮತ್ತಾಳು ಗ್ರಾಮದ ಮಾವನ ಮನೆಗೆ ಬಂದಿದ್ದ. 21ರಂದು ಸಂಜೆ ಹೆಮ್ಮತ್ತಾಳು ಗ್ರಾಮದ ಅಯ್ಯಕುಟ್ಟೀರ ರಂಜಿತ್‌ ಮಾಚಯ್ಯ ಜೊತೆ ಕಾಡುಹಂದಿ ಬೇಟೆಗೆ ಹೋಗಿದ್ದ. ಆಗ ಕಾಡುಹಂದಿ ಬಂತೆಂದು ಭಾವಿಸಿ ಹಾರಿಸಿದ್ದ ಗುಂಡು ರಂಜಿತ್‌ಗೆ ತಗುಲಿ ಅವರು ಸ್ಥಳದಲ್ಲಿ ಮೃತಪಟ್ಟಿದ್ದರು. ಬಳಿಕ ದೇವಯ್ಯ ತಲೆಮರೆಸಿಕೊಂಡಿದ್ದ.

ADVERTISEMENT

ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿದ್ದೇ ಎಂಬುದರ ಕುರಿತೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿ ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ₹ 5 ಸಾವಿರ ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.