ಸಿದ್ದಾಪುರ: ಸಿದ್ದಾಪುರದ ಮುತ್ತಪ್ಪ- ಭಗವತಿ ದೇವಾಲಯದ ವಾರ್ಷಿಕೋತ್ಸವವು ಮಾರ್ಚ್ 9ರಿಂದ 13ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದ್ದಾರೆ.
ಮಾರ್ಚ್ 9 ರಂದು ಬೆಳಿಗ್ಗೆ ಪಂಚಗವ್ಯ, 6 ಗಂಟೆಗೆ ಗಣಪತಿ ಹೋಮ ಹಾಗೂ 10ಕ್ಕೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ದೊರಯಲಿದೆ. 10.30ಕ್ಕೆ ದೀಪಾರಾಧನೆ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ನಂತರ ಅನ್ನದಾನ ನಡೆಯಲಿದೆ. ಸಂಜೆ 6.50ಕ್ಕೆ ಸಂಧ್ಯಾದೀಪ, ಪಂಚಗವ್ಯ, ಮಹಾಪೂಜೆ, ಸಂಜೆ 6.51 ಕ್ಕೆ ಸಂಧ್ಯಾದೀಪ, ರಂಗಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾರ್ಚ್ 10ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 8.30ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ದೇವರ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಮಾರ್ಚ್11 ರಂದು ಬೆಳಿಗ್ಗೆ 6.30 ಕ್ಕೆ ಮಹಾಗಣಪತಿ ಹೋಮ, 8 ರಿಂದ 12 ಗಂಟೆಯವರೆಗೆ ಆಶ್ಲೇಷ ಬಲಿ, ನಾಗಹೋಮ, ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 5.30ಗಂಟೆಗೆ ಕಾವೇರಿ ನದಿಯಲ್ಲಿ ದೇವಿಯ ಸ್ನಾನ, ರಾತ್ರಿ 8 ಗಂಟೆಗೆ ದೇವಿಯ ನರ್ತನ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಮಾರ್ಚ್ 12 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿಹೋಮ, ಮದ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 5 ಕ್ಕೆ ಶ್ರೀ ಮುತ್ತಪ್ಪನ ಮಲೆ ಇಳಿಸುವುದು, ರಾತ್ರಿ 7 ಗಂಟೆಗೆ ಶಾಸ್ತಪ್ಪನ ವೆಳ್ಳಾಟಂ, ರಾತ್ರಿ 8.30ಕ್ಕೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, 9 ಗಂಟೆಗೆ ವಸೂರಿಮಾಲ ಸ್ನಾನಕ್ಕೆ ಹೊರಡುವುದು, 9.30 ಅನ್ನಸಂತರ್ಪಣೆ ನಡೆಯಲಿದೆ.
ಮಾರ್ಚ್ 13ರ ವಿವಿಧ ತೆರೆಗಳು ಆರಂಭವಾಗಲಿದ್ದು, ಪಾತಃಕಾಲ 5 ಗಂಟೆಗೆ ಗುಳಿಗನ ತೆರೆ, 6.30ಕ್ಕೆ ಶಾಸ್ತಪ್ಪನ, 7 ಗಂಟೆಗೆ ಮುತ್ತಪ್ಪನ, ತಿರುವಪ್ಪನ, 8ಕ್ಕೆ ಭಗವತಿಯ, 11 ಗಂಟೆಗೆ ವಿಷ್ಣುಮೂರ್ತಿಯ ತೆರೆ ಹಾಗೂ 1 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.