ADVERTISEMENT

'ಪ್ರಕೃತಿಯ ನಾಶ, ಜೀವಜಾಲದ ವಿನಾಶ

ವಿದ್ಯಾರ್ಥಿಗಳಿಂದ ಜಾಥಾ, ಭಾಷಣ, ಚಿತ್ರ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 5:29 IST
Last Updated 6 ಜೂನ್ 2025, 5:29 IST
ನಾಪೋಕ್ಲು ಸಮೀಪದ ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ನಾಪೋಕ್ಲು ಸಮೀಪದ ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.   

ನಾಪೋಕ್ಲು: ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ’ಪ್ಲಾಸ್ಟಿಕ್ ತ್ಯಜಿಸಿಮಾಲಿನ್ಯ ತಡೆಯಿರಿ, ’ಪ್ಲಾಸ್ಟಿಕ್ ತ್ಯಜಿಸಿಪರಿಸರ ಸಂರಕ್ಷಿಸಿ, ’ಕಾಡನ್ನು ಬೆಳೆಸಿ ನಾಡನ್ನು ಉಳಿಸಿ…ಮುಂತಾದ ಘೋಷಣೆಗಳೊಂದಿಗೆ ವಿವಿಧ ಶಾಲೆಗಳವಿದ್ಯಾರ್ಥಿಗಳು ಗುರುವಾರ ಜಾಥಾ ನಡೆಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು.

‘ನಾನು ನೆಲ-ಜಲ, ಅರಣ್ಯ, ವನ್ಯಜೀವಿಗಳು, ಜೀವ- ವೈವಿಧ್ಯತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಸುತ್ತಲಿನ ಪರಿಸರದಲ್ಲಿ ಅರಣ್ಯ ಗಿಡ ನೆಟ್ಟು ಅದನ್ನು ಬೆಳೆಸಿ ಪೋಷಿಸುತ್ತೇನೆ. ಪರಿಸರಕ್ಕೆ ಧಕ್ಕೆಯನ್ನು ಉಂಟು ಮಾಡದಂತೆ ಸದಾ  ತೊಡಗಿಸಿಕೊಳ್ಳುತ್ತೇನೆ.  ಮಾಲಿನ್ಯಕಾರಿ ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳಾದ ಬಟ್ಟೆ, ಕಾಗದ ಹಾಗೂ ಸೆಣಬು ಇತ್ಯಾದಿ ವಸ್ತುಗಳನ್ನು ಬಳಕೆ ಮಾಡುತ್ತೇನೆ.  ಜಾಗೃತಿ ಮೂಡಿಸುತ್ತೇನೆ  ಎಂದು  ಪ್ರತಿಜ್ಞೆಯನ್ನು ಸ್ವೀಕರಿಸುತ್ತಿದ್ದೇನೆ ’  ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ವಿದ್ಯಾರ್ಥಿಗಳಿಗೆ ಭಾಷಣ,ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಚೇರಂಬಾಣೆ ಕಾಲೇಜು: ಪ್ರಕೃತಿಯ ನಾಶ ಮನುಕುಲದ ವಿನಾಶ, ಎಂದು ಅರುಣ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಕೆ. ಆರ್. ರಮೇಶ್ ಹೇಳಿದರು.  ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ   ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

ADVERTISEMENT

ಸುಂದರ ಜೀವವೈವಿಧ್ಯವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ,  ಪ್ರಕೃತಿಯ ಸಮತೋಲನದಿಂದ ಜೀವನವನ್ನು ಸಾಧಿಸಲು ಸಾಧ್ಯ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.  ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ವಿವಿಧ   ಗಿಡಗಳನ್ನು ನೆಟ್ಟರು. ಶಿಕ್ಷಕರಾದ ಎಸ್ ಪಿ ಪರಮೇಶ್, ಎಂ.ಎ ಅಯ್ಯಪ್ಪ , ಹರೀಶ್, ಹೇಮಾವತಿ , ಶೃಂಗ ಮತ್ತು ರೋಹಿತ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಸಂಪಾಜೆಯಲ್ಲಿಆಚರಣೆ :  ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗಗಳ ಆಶ್ರಯದಲ್ಲಿ  ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರದ ಮಹತ್ವವನ್ನು ಮತ್ತು ಪರಿಸರ ಸಂರಕ್ಷಣೆಯ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಉಪಯುಕ್ತ ಗಿಡಗಳನ್ನು ನೆಡಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷ , ಸಂಚಾಲಕರು, ಉಪನ್ಯಾಸಕರು, ಅಧ್ಯಾಪಕರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.