ನಾಪೋಕ್ಲು: ನೆಲಜಿ ಗ್ರಾಮದ ಇಗ್ಗುತಪ್ಪ ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ಮಂಗಳವಾರ ರಾತ್ರಿ ದೋಚಿದ್ದಾರೆ.
ಈಚೆಗೆ ಗ್ರಾಮದ ಭಗವತಿ ದೇವಾಲಯದ ಬೀಗ ಒಡೆದು ಕಳ್ಳರು ಹಣವನ್ನು ದೋಚಿದ್ದರು. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಬಲ್ಲಮಾವಟಿ, ಪೇರೂರು, ದೊಡ್ಡಪುಲಿಕೋಟು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಅರ್ಚಕರು ಹುಂಡಿಯಲ್ಲಿರುವ ಹಣವನ್ನು ತೆಗೆದು ಸಂರಕ್ಷಿಸುವಂತೆ ಪೊಲೀಸ್ ಇಲಾಖೆಯ ಪ್ರಕಟಣೆ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.