ADVERTISEMENT

ಮಡಿಕೇರಿ: ರೋಟರಿ ವುಡ್ಸ್‌ನಿಂದ ಮೂವರು ಕ್ರೀಡಾಪಟುಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 13:54 IST
Last Updated 31 ಆಗಸ್ಟ್ 2024, 13:54 IST
ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಹಾಕಿ ಕ್ರೀಡೆಯಲ್ಲಿ ಉದಯೋನ್ಮುಖ ಪ್ರತಿಭೆ ಎಸ್.ಕೆ.ದೇಚಕ್ಕ, ರಾಷ್ಟ್ರಿಯ ಹಾಕಿ ತೀರ್ಪುಗಾರ ಅಯ್ಯಪ್ಪ ಹಾಗೂ ಸೆಸ್ಟೋಬಾಲ್ ಕ್ರೀಡೆಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ ಮಹಮ್ಮದ್ ಶಾಹಿಲ್ ಅವರನ್ನು ಸನ್ಮಾನಿಸಲಾಯಿತು.

ಮಡಿಕೇರಿ: ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮೂವರು ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಹಾಕಿ ಕ್ರೀಡೆಯಲ್ಲಿ ಉದಯೋನ್ಮುಖ ಪ್ರತಿಭೆ  ಎಸ್.ಕೆ.ದೇಚಕ್ಕ, ರಾಷ್ಟ್ರಿಯ ಹಾಕಿ ತೀರ್ಪುಗಾರ ಅಯ್ಯಪ್ಪ ಹಾಗೂ ಸೆಸ್ಟೋಬಾಲ್ ಕ್ರೀಡೆಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ ಮಹಮ್ಮದ್ ಶಾಹಿಲ್ ಸನ್ಮಾನಕ್ಕೆ ಪಾತ್ರರಾದರು.

ರೋಟರಿ ವುಡ್ಸ್ ಅಧ್ಯಕ್ಷ  ಹರೀಶ್ ಕಿಗ್ಗಾಲ್ ಮಾತನಾಡಿ, ‘ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿದ ಅನೇಕ ಕ್ರೀಡಾಪಟುಗಳು ಜಿಲ್ಲೆಯಲ್ಲಿದ್ದಾರೆ. ಈ ಬಾರಿ ಎಳೆಯ ಪ್ರತಿಭೆಗಳನ್ನು ಹುಡುಕಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಸನ್ಮಾನ ಮಾಡಲಾಗುತ್ತಿದೆ’ ಎಂದರು.‌

ADVERTISEMENT

ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್, ಭಗತ್ ರಾಜ್, ರಂಜಿತ್ ಕಿಗ್ಗಾಲ್, ಪ್ರದೀಪ್ ಕಿಗ್ಗಾಲ್, ಬಾಲಸುಬ್ರಹ್ಮಣ್ಯ, ಲೋಕೇಶ್, ಜಹೀರ್ ಅಹ್ಮದ್, ಪವನ್, ಧನಂಜಯ ಶಾಸ್ತ್ರಿ, ಬೋಪಣ್ಣ, ಪದ್ಮಾಗಿರಿ, ಪ್ರಮಿಳಾಶೆಟ್ಟಿ ರವಿಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.