ADVERTISEMENT

ಕುಶಾಲನಗರದ ಕೂಡ್ಲೂರು ಬಳಿ ಮರದ ಗಾಣದ ಅಡುಗೆ ಎಣ್ಣೆ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 3:21 IST
Last Updated 26 ಮೇ 2022, 3:21 IST
ಕುಶಾಲನಗರ ಸಮೀಪದ ಕೂಡ್ಲೂರು ಬಳಿ ಸ್ಥಾಪಿಸಿರುವ ಮರದ ಗಾಣದ ಅಡುಗೆ ಎಣ್ಣೆ ಘಟಕವನ್ನು ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಉದ್ಘಾಟಿಸಿದರು. ಎಂ.ಆರ್. ಸತ್ಯನಾರಾಯಣ, ಎಚ್.ಎನ್. ರಾಕೇಶ್, ಎಂ.ಎಸ್. ಶರತ್, ರಮೇಶ್ ಹಂಡ್ರಂಗಿ ಇದ್ದರು
ಕುಶಾಲನಗರ ಸಮೀಪದ ಕೂಡ್ಲೂರು ಬಳಿ ಸ್ಥಾಪಿಸಿರುವ ಮರದ ಗಾಣದ ಅಡುಗೆ ಎಣ್ಣೆ ಘಟಕವನ್ನು ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಉದ್ಘಾಟಿಸಿದರು. ಎಂ.ಆರ್. ಸತ್ಯನಾರಾಯಣ, ಎಚ್.ಎನ್. ರಾಕೇಶ್, ಎಂ.ಎಸ್. ಶರತ್, ರಮೇಶ್ ಹಂಡ್ರಂಗಿ ಇದ್ದರು   

ಕುಶಾಲನಗರ: ಸಮೀಪದ ಕೂಡ್ಲೂರು ಬಳಿ ಹಾಸನ– ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಸ್ಥಾಪಿಸಿರುವ ಮರದ ಗಾಣದ ಅಡುಗೆ ಎಣ್ಣೆ ಘಟಕವನ್ನು ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ನೈಸರ್ಗಿಕ ಹಾಗೂ ಸಾಂಪ್ರದಾಯಿಕವಾಗಿ ಮರದ ಗಾಣದಿಂದ ತೆಗೆದ ಎಣ್ಣೆಯು ಪ್ರತಿಯೊಬ್ಬರ ಆರೋಗ್ಯಕ್ಕೆ ಪೂರಕವಾಗಿದೆ. ಗಾಣದಿಂದ ಎಣ್ಣೆ ತೆಗೆದು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಕಲ್ಪತರು ನ್ಯಾಚುರಲ್ ಆಯಿಲ್ ಘಟಕ ಮಾಡಲು ಮುಂದಾಗಿದೆ. ಎಣ್ಣೆ ತೆಗೆಯುವುದನ್ನು ನೋಡಿ ಖರೀದಿಸಬಹುದು’ ಎಂದರು.

ಪತ್ರಕರ್ತ ಎಂ.ಆರ್. ಸತ್ಯನಾರಾಯಣ ಮಾತನಾಡಿ, ‘ಪತ್ರಕರ್ತರಾಗಿದ್ದ ರಮೇಶ್ ಹಂಡ್ರಂಗಿ ಉದ್ಯಮ ಕ್ಷೇತ್ರಕ್ಕೆ ಕೈ ಹಾಕಿದ್ದಾರೆ. ಪರಿಶುದ್ಧ ಕಡಲೆಕಾಯಿ, ಸೂರ್ಯಕಾಂತಿ ಹಾಗೂ ಕೊಬ್ಬರಿ ಎಣ್ಣೆಯನ್ನು ಗ್ರಾಹಕರಿಗೆ ಪೂರೈಸಲಿ’ ಎಂದು ಸಲಹೆ ನೀಡಿದರು.

ADVERTISEMENT

ಘಟಕದ ಮಾಲೀಕ ರಮೇಶ್ ಹಂಡ್ರಂಗಿ, ಮುಖಂಡರಾದ ಎಚ್.ಎನ್. ರಾಕೇಶ್, ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದ ಸದಸ್ಯ ಎಂ.ಎಸ್. ಶರತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.