ADVERTISEMENT

ವೃದ್ಧಾಪ್ಯ ವೇತನ: ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ–ಅಶೋಕ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 14:42 IST
Last Updated 29 ನವೆಂಬರ್ 2020, 14:42 IST
ಆರ್.ಅಶೋಕ
ಆರ್.ಅಶೋಕ   

ಮಡಿಕೇರಿ: ವೃದ್ಧಾಪ್ಯ ವೇತನ ತಲುಪಿಸಲುರಾಜ್ಯದಲ್ಲಿ 15 ದಿನಗಳಲ್ಲಿ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ‌ ಭಾನುವಾರ ಇಲ್ಲಿ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕು ಕಚೇರಿ ಉದ್ಘಾಟಿಸಿದ ಅವರು, ‘ವಯಸ್ಕರು ಇನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆಯಾ ಜಿಲ್ಲಾಡಳಿತದ ಬಳಿ ಎಲ್ಲರ ಆಧಾರ್‌ ಕಾರ್ಡ್‌ನ ವಿವರವಿದ್ದು, 60 ವರ್ಷ ತುಂಬಿದ ತಕ್ಷಣ ಅಧಿಕಾರಿಗಳೇ ಮನೆಗೆ ಪತ್ರ ಕಳುಹಿಸಲಿದ್ದಾರೆ. ಅದಕ್ಕಾಗಿ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗುತ್ತಿದ್ದು, ಯಾವ ಗ್ರಾಮದಲ್ಲಿ ಯಾರು 60 ವರ್ಷ ತುಂಬಿದವರು ನೆಲೆಸಿದ್ದಾರೆ, ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿಯೂ ಗೊತ್ತಾಗಲಿದೆ’ ಎಂದರು.

‘ಮನೆಗೆ ಪತ್ರ ಬಂದ ಮೇಲೆ ವೃದ್ಧರು ತಮ್ಮ ಬ್ಯಾಂಕ್‌ ಖಾತೆಯ ವಿವರ ತಲುಪಿಸಿದರೆ ಸಾಕು. ಖಾತೆಗೆ ನೇರವಾಗಿ ವೃದ್ಧಾಪ್ಯ ವೇತನ ಜಮೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.