ADVERTISEMENT

‘ಇನ್‌ಸ್ಪೈರ್‌ ಅವಾರ್ಡ್‌’ ಸ್ಪರ್ಧೆ: ರಾಷ್ಟ್ರಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 13:52 IST
Last Updated 1 ಜನವರಿ 2019, 13:52 IST
ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾದ ವರ್ಷಿತ್‌ ಕುಮಾರ್‌ ಜೊತೆಗೆ ಶಾಲೆಯ ಶಿಕ್ಷಕರು
ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾದ ವರ್ಷಿತ್‌ ಕುಮಾರ್‌ ಜೊತೆಗೆ ಶಾಲೆಯ ಶಿಕ್ಷಕರು   

ಮಡಿಕೇರಿ: ತಾಲ್ಲೂಕಿನ ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿ ವರ್ಷಿತ್‌ ಕುಮಾರ್‌ ‘ಇನ್‌ಸ್ಪೈರ್‌ ಅವಾರ್ಡ್‌’ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹಾಸನದಲ್ಲಿ ಜಿಲ್ಲಾ ಮತ್ತು ವಿಭಾಗೀಯಮಟ್ಟದ ಸ್ಪರ್ಧೆ ಇತ್ತೀಚೆಗೆ ನಡೆದಿತ್ತು. 9ನೇ ತರಗತಿಯ ಕೆ.ಎಲ್.ಕೃಷ್ಣ ಮತ್ತು ವರ್ಷಿತ್ ಕುಮಾರ್ ಸ್ಪರ್ಧಿಸಿದ್ದರು.

ವರ್ಷಿತ್ ಕುಮಾರ್ ತಯಾರಿಸಿದ ‘ಬಹುಪಯೋಗಿ ಕೃಷಿ ಯಂತ್ರ’ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು. ಬಳಿಕ ರಾಜ್ಯಮಟ್ಟದ ಸ್ಪರ್ಧೆಯು ಮೈಸೂರಿನ ಆದರ್ಶ ವಿದ್ಯಾಲಯದಲ್ಲಿ ನಡೆದು ಕೃಷಿ ಯಂತ್ರವು ರಾಷ್ಟಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದೆ.

ADVERTISEMENT

ವಿಜ್ಞಾನ ಶಿಕ್ಷಕ ಸಿ.ಆರ್. ಲೋಕೇಶ್ ಅವರು ಮಾರ್ಗದರ್ಶನ, ಗಣೇಶ್‌ ಅವರು ತಾಂತ್ರಿಕ ಸಲಹೆ ನೀಡಿದ್ದರು. ದೆಹಲಿಯಲ್ಲಿ ಫೆಬ್ರುವರಿ 2ನೇ ವಾರರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ‍ಪ್ರೌಢಶಾಲಾ ಮುಖ್ಯಶಿಕ್ಷಕ ಎ.ಟಿ. ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.