ADVERTISEMENT

ಕಲ್ಲುಗುಂಡಿ: 16 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 11:58 IST
Last Updated 2 ಫೆಬ್ರುವರಿ 2019, 11:58 IST
ಸಂಪಾಜೆಯ ಕಲ್ಲುಗುಂಡಿ ನೆಲ್ಲಿಕುಮೇರಿ ಗ್ರಾಮದಲ್ಲಿ ಸೆರೆ ಸಿಕ್ಕ 16 ಅಡಿ ಉದ್ದದ ಕಾಳಿಂಗ ಸರ್ಪ
ಸಂಪಾಜೆಯ ಕಲ್ಲುಗುಂಡಿ ನೆಲ್ಲಿಕುಮೇರಿ ಗ್ರಾಮದಲ್ಲಿ ಸೆರೆ ಸಿಕ್ಕ 16 ಅಡಿ ಉದ್ದದ ಕಾಳಿಂಗ ಸರ್ಪ   

ಮಡಿಕೇರಿ: ಸಂಪಾಜೆಯ ಕಲ್ಲುಗುಂಡಿ ನೆಲ್ಲಿಕುಮೇರಿ ಗ್ರಾಮದಲ್ಲಿ 16 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಯಾಗಿದೆ.

ತ್ಯಾಗರಾಜ ಅವರ ಮನೆಯ ಹಿತ್ತಲಲ್ಲಿ ಕಂಡುಬಂದ ಕಾಳಿಂಗ ಸರ್ಪವನ್ನು ಉರಗಪ್ರೇಮಿ ಅರಂತೋಡಿನ ಶಿವಾನಂದ ಕುಕ್ಕುಂಬಳ ಅವರು ಸೆರೆ ಹಿಡಿದಿದ್ದರು. ಅರಣ್ಯ ಇಲಾಖೆಯ ಸಲಹೆಯಂತೆ ಮಂಗಳೂರಿನ ನಿಸರ್ಗಧಾಮಕ್ಕೆ ಹಸ್ತಾಂತರಿಸಲಾಯಿತು.

ಶರತ್ ಕೀಲಾರು, ಮನೋಹರ್ ಕಳಮೆ, ಕೇಶವ ಬಂಗ್ಲೆಗುಡ್ಡೆ, ನೆಲ್ಲಿಕುಮೇರಿ ನಿವಾಸಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಶಿವಾನಂದ ಅವರ ಕಾರ್ಯಕ್ಕೆ ಸಹಾಯ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.