ADVERTISEMENT

ಕಡವೆ ಬೇಟೆ: ಓರ್ವನ ಬಂಧನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 14:25 IST
Last Updated 4 ಡಿಸೆಂಬರ್ 2018, 14:25 IST
 ವಿರಾಜಪೇಟೆ ಸಮೀಪದ ತೋರ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಅಕ್ರಮವಾಗಿ ಬೇಟೆಯಾಡಿದ ತಂಡದ ಓರ್ವನನ್ನು ಕಡವೆ ಮಾಂಸ ಹಾಗೂ ಕೋವಿಯೊಂದಿಗೆ ಬಂಧಿಸಲಾಗಿದೆ
 ವಿರಾಜಪೇಟೆ ಸಮೀಪದ ತೋರ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಅಕ್ರಮವಾಗಿ ಬೇಟೆಯಾಡಿದ ತಂಡದ ಓರ್ವನನ್ನು ಕಡವೆ ಮಾಂಸ ಹಾಗೂ ಕೋವಿಯೊಂದಿಗೆ ಬಂಧಿಸಲಾಗಿದೆ   

ವಿರಾಜಪೇಟೆ: ಸಮೀಪದ ತೋರ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಕಡವೆ ಹತ್ಯೆ ಮಾಡಿದ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.

ಐವರ ತಂಡ ಕಡವೆ ಬೇಟೆಯಾಡಿ ಮಾಂಸ ಒಯ್ಯುವಾಗ ಮಾಹಿತಿ ಪಡೆದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಬಂಧಿತನಿಂದ ಕಡವೆ ಮಾಂಸ, ಕೋವಿ ವಶಕ್ಕೆ ಪಡೆಯಲಾಗಿದೆ.

ಬಂಧಿತನನ್ನು ವೀರೇಂದ್ರ ಎಂದು ಗುರುತಿಸಿದ್ದು, ಜೀವನ್‌, ಗಣೇಶ್‌, ಕರುಂಬಯ್ಯ ಹಾಗೂ ಮಹೇಶ್‌ ಎಂಬವರು ಪರಾರಿಯಾಗಿದ್ದಾರೆ. ಬಂಧಿತ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಉಪ ಅರಣ್ಯಸಂರಕ್ಷಣಾಧಿಕಾರಿ ಕ್ರಿಸ್ತರಾಜ್‌, ರೋಷಿಣಿ, ಗೋಪಾಲ್‌, ಪ್ರಶಾಂತ್‌, ಕುಮಾರ್‌, ಅಶೋಕ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.