ಗೋಣಿಕೊಪ್ಪಲು: ಕೊಡಗಿನ ತಲಕಾವೇರಿ ತೀರ್ಥವನ್ನು ಕೊಡವ ರೈಡರ್ಸ್ ಕ್ಲಬ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸದಸ್ಯರು ಕಾಶಿಗೆ ತೆರಳಿ ಅಲ್ಲಿನ ವಿಶ್ವನಾಥ ದೇವಸ್ಥಾನಕ್ಕೆ ಭಾನುವಾರ ಅರ್ಪಿಸಿದರು.
ಕೊಡಗು ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಚಕ್ಕೇರ ಮನು, ರಮೇಶ್ ಕುಮಾರ್ ಹಾಗೂ ದೀನ್ ದಯಾಳ್ ಪಾಂಡೆ ಅವರ ಸಹಾಯದಿಂದ ಅಜ್ಜಿಕುಟ್ಟೀರ ಪ್ರಥ್ವಿ ಹಾಗೂ ಕಟುಂಬದವರು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಕಾಶಿಗೆ ತೆರಳಿದ್ದರು.
ಸೋಮವಾರ ಅಯೋಧ್ಯೆಗೆ ತೆರಳಿ ಬಾಲ ರಾಮನಿಗೆ ತೀರ್ಥ ಅರ್ಪಿಸಲಿದ್ದಾರೆ. ಗಾನ ಸುಬ್ಬಯ್ಯ, ಅಖಿಲ ಕುಟುಂಬದ ಸದಸ್ಯರಾದ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಕಸ್ತೂರಿ ಮಾದಯ್ಯ ಮಾಚಿಮಂಡ ಯಶೋಧ ತಿಮ್ಮಯ್ಯ, ಶಾಶ್ವತ್ ಹಾಗೂ ಸಾಹಿತ್ಯ ಜತೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.