ಕಾಡಾನೆಗಳು
ಸಿದ್ದಾಪುರ: ಕಣ್ಣಂಗಾಲ ಗ್ರಾಮದಲ್ಲಿ 27 ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಬುಧವಾರ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯಿತು.
ಈ ವೇಳೆ ಮರಿಗಳು ಸೇರಿದಂತೆ ಒಟ್ಟು 27 ಕಾಡಾನೆಗಳು ಕಂಡುಬಂದವು. ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿದ್ದು, ಅರಣ್ಯ ಇಲಾಖೆ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿತು. ಆನೆಗಳು ತೋಟದಲ್ಲೇ ಇದ್ದು, ಗುರುವಾರ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಶಿವರಾಮ್, ಡಿಆರ್‌ಎಫ್‌ಒ ಸಂಜೀತ್, ಸಿಬ್ಬಂದಿ, ಆರ್.ಆರ್.ಟಿ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.