ADVERTISEMENT

ಕಾಡಾನೆ ದಾಳಿ: ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 8:51 IST
Last Updated 17 ಏಪ್ರಿಲ್ 2021, 8:51 IST
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಕಾಡಾನೆಗಳು ಬಾಳೆ ಗಿಡಗಳನ್ನು ನಾಶಪಡಿಸಿರುವುದು
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಕಾಡಾನೆಗಳು ಬಾಳೆ ಗಿಡಗಳನ್ನು ನಾಶಪಡಿಸಿರುವುದು   

ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ನಿರಂತರವಾಗಿ ಬಾಳೆ, ಕಾಫಿ, ತೆಂಗು, ಅಡಿಕೆ ಬೆಳೆಗಳನ್ನು ನಾಶಗೊಳಿಸುತ್ತಿದ್ದು, ಕಾಡಾನೆಗಳನ್ನು ಇಲ್ಲಿಂದ ಸ್ಥಳಾಂತರಿಸುವ ಮೂಲಕ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾಡಾನೆಗಳು ಗುರುವಾರ ರಾತ್ರಿ ಚೋಕಿರ ಉತ್ತಪ್ಪ, ಗಣಪತಿ, ಚಂಗಪ್ಪ, ತೋಲಂಡ ಅಯ್ಯಪ್ಪ, ಎಡಿಕೇರಿ ಗಣಪತಿ ಅವರ ತೋಟಕ್ಕೆ ದಾಳಿ ಮಾಡಿ ನಾಶಗೊಳಿಸಿವೆ. ಸ್ಥಳಕ್ಕೆ ಅರಣ್ಯ ರಕ್ಷಕರಾದ ಕಾಳೇಗೌಡ ಮತ್ತು ಸಿಬ್ಬಂದಿ ಆಗಮಿಸಿ ಪರಿಹಾರದ ಭರವಸೆ ನೀಡಿದ್ದಾರೆ.

ಕಾಡಾನೆ ಹಾವಳಿ ತಡೆಗೆ ಒತ್ತಾಯ
ಸುಂಟಿಕೊಪ್ಪ
: ರಾತ್ರಿ ವೇಳೆ ಒಂಟಿ ಸಲಗ ತೋಟಕ್ಕೆ ಲಗ್ಗೆಯಿಟ್ಟು ಬಾಳೆ ಗಿಡ, ತೆಂಗಿನ ಸಸಿ, ಮರಗೆಣಸನ್ನು ತಿಂದು ನಾಶಪಡಿಸಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಐಗೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ಗುರುವಾರ ರಾತ್ರಿ ಕಾಡಾನೆಯೊಂದು ಗ್ರಾಮದ ಪಿ.ಕೆ.ಸೋಮಯ್ಯ, ಎಂ.ಸಿ.ಸಂಜಯ್, ಅಪ್ಪಣಿ, ಹರಪಳ್ಳಿತೋಟ, ಜಿ.ಕೆ.ಬಾಲಕೃಷ್ಣ ಅವರ ಜಮೀನಿಗೆ ನುಗ್ಗಿ ಬಾಳೆ ಗಿಡ, ತೆಂಗಿನ ಸಸಿ, ಮರಗೆಣಸನ್ನು ಬೇಕಾಬಿಟ್ಟಿ ತಿಂದು, ಕಾಫಿ ಗಿಡಗಳನ್ನು ಕಿತ್ತು ನಾಶಪಡಿಸಿದೆ. ‌

‘ಐಗೂರು ಯಡವಾರೆ, ಕಾಜೂರು, ಯಡವನಾಡು ವಲಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಹಿಂಡು ಹಿಂಡಾಗಿ ಲಗ್ಗೆಯಿಡುತ್ತಿವೆ. ಅರಣ್ಯ ಇಲಾಖೆಯವರು ಆನೆಯನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.