ADVERTISEMENT

ಗೋಣಿಕೊಪ್ಪಲು: ದೇವಸ್ಥಾನ ಅಭಿವೃದ್ಧಿಗೆ ಪೊನ್ನಣ್ಣ ಧನ ಸಹಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:37 IST
Last Updated 18 ಜೂನ್ 2025, 13:37 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಮಹಾತ್ಮಗಾಂಧಿ ನಗರದ ಕನ್ನಂಬಾಡಿಯಮ್ಮ ದೇವಸ್ಥಾನ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣ ನೀಡಿದ ₹ 1.50 ಲಕ್ಷ ಮೊತ್ತದ ಚೆಕ್ ಅನ್ನು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೀರಿರ ನವೀನ್ ದೇವಸ್ಥಾನ ಸಮಿತಿಯವರಿಗೆ ನೀಡಿದರು

ಗೋಣಿಕೊಪ್ಪಲು: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1ನೇ ವಿಭಾಗದ ಮಹಾತ್ಮಗಾಂಧಿ ನಗರದಲ್ಲಿರುವ ಕನ್ನಂಬಾಡಿಯಮ್ಮ ದೇವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಶಾಸಕ ಎ.ಎಸ್.ಪೊನ್ನಣ್ಣ ವೈಯಕ್ತಿಕವಾಗಿ ₹1.50 ಲಕ್ಷ ನೀಡಿದ್ದಾರೆ.

ಈ ಮೊತ್ತದ ಚೆಕ್ ಅನ್ನು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೀದೇರಿರ ನವೀನ್ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಪಿ. ಪರಮೇಶ್ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಮೀದೀರಿರಿ ನವೀನ್, ಗ್ರಾಮಸ್ಥರ ಕೋರಿಕೆಗೆ ಶಾಸಕ ಪೊನ್ನಣ್ಣ ಸ್ಪಂದಿಸಿದ್ದಾರೆ. ಈ ಧನ ಸಹಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ಎಂ.ರಶೀದ್, ಸದಸ್ಯರಾದ ಮೂಕಳೇರ ಸುಮಿತಾ, ಕೋಳೆರ ಭಾರತಿ, ಜುನೈದ್, ಕನ್ನಂಬಾಡಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಶಶಿ, ಶೇಖರ, ದರ್ಶನ್, ಸ್ವಾಮಿ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.