
ಪ್ರಜಾವಾಣಿ ವಾರ್ತೆಮಡಿಕೇರಿ: ತಜ್ಞ ವೈದ್ಯ ರವಿ ಅಪ್ಪಾಜಿ ಅವರಿಗೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಪ್ರತಿಷ್ಠಿತ ‘ಸರ್ವೀಸ್ ಎಬೋವ್ ಸೆಲ್ಫ್’ ಎಂಬ ಪ್ರಶಸ್ತಿ ದೊರಕಿದೆ.
ರೋಟರಿ ಸಂಸ್ಥೆಯಲ್ಲಿ ಇದು ಅತ್ಯುನ್ನತ ಪ್ರಶಸ್ತಿ. ಚೆನ್ನೈನಲ್ಲಿ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಮಾಜಿ ಗವರ್ನರ್ ಪಾಂಡುರಂಗ ಶೆಟ್ಟಿ ಅವರು ಡಾ.ರವಿ ಅಪ್ಪಾಜಿ ಅವರಿಗೆ ಪ್ರದಾನ ಮಾಡಿದರು.
ರೋಟರಿ ಸಂಸ್ಥೆಯಲ್ಲಿ ಡಾ.ರವಿ ಅವರ ಸಕ್ರಿಯ ಸೇವೆ, ರೋಟರಿ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.