ADVERTISEMENT

ಮಡಿಕೇರಿ: 24 ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಮೂವರು ಪತ್ರಿಕಾ ವಿತರಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 5:35 IST
Last Updated 29 ಜುಲೈ 2024, 5:35 IST
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿಯಲ್ಲಿ 24 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿಯಲ್ಲಿ 24 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು   

ಮಡಿಕೇರಿ: ಇಲ್ಲಿನ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 24 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಗೌರವಿಸಲಾಯಿತು.

ಆರ್.ಸಮರ್ಥ್, ಎನ್.ಸಾಗಾರಿಕ, ಆಯುಷ್ ಕುಟ್ಟಪ್ಪ, ಬೊಳ್ಳಜಿರ ದೇಚಮ್ಮ ಅಯ್ಯಪ್ಪ, ಬಾಚರಣಿಯಂಡ ಪರಿಧಿ ಪೊನ್ನಮ್ಮ, ಬಾಚರಣಿಯಂಡ ಶಶಾಂಕ್ ಸೋಮಯ್ಯ, ಎಸ್.ಆರ್.ಸಂಸ್ಕೃತಿ, ರಾಗ ಎಚ್.ಶೆಟ್ಟಿ, ವಿ.ಎ.ಚಿಂತನ್, ಎಂ.ಸಿ.ವಿಷ್ಣುವರ್ಧನ್, ಪಿ.ಸಿ.ಕಾಜಲ್, ಎ.ವಿ.ಸಮೃದ್ಧಿ, ಕೆ.ಎಸ್.ಅನನ್ಯ, ಕೆ.ಎಸ್.ದೀಕ್ಷಾ, ಕೆ.ಎಸ್.ಲಕ್ಷಿತಾ, ನಿವೇದ್ ಬಾಲಾಜಿ, ಎಸ್.ಪಿ.ಚಿತ್ತಾರ, ಎಸ್.ಪಿ.ಇಂಚರ, ತಿಷ್ಯಾ ಪೊನ್ನೇಟಿ, ರಸಜ್ಞ ಮಾದಪ್ಪ, ಎಂ.ರಕ್ಷನ್, ಎಂ.ಹಿಮಾನಿ, ಕೆ.ಈಶಾನ್ವಿ, ಕೆ.ಜೆ.ಮೋದಕ್ ಪ್ರತಿಭಾ ಪುರಸ್ಕಾರ ಪಡೆದುಕೊಂಡರು.

ADVERTISEMENT

ಹಿರಿಯ ಪತ್ರಿಕಾ ವಿತರಕರಾದ ಸುಂಟಿಕೊಪ್ಪದ ಮುಕ್ಕಾಟೀರ ಎ ವಸಂತ್, ವಿರಾಜಪೇಟೆಯ ದೀಪಕ್ ದಾಸ್, ಚೆಟ್ಟಳ್ಳಿಯ ಟಿ.ಎನ್.ಧನಲಕ್ಷ್ಮಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಮುಖಂಡ ಕೆ.ಜಿ.ಬೋಪಯ್ಯ, ‘ಪತ್ರಿಕಾ ರಂಗ ಉಳಿದರೆ ಪ್ರಜಾಪ್ರಭುತ್ವ, ಸಂವಿಧಾನವೂ ಉಳಿಯುತ್ತದೆ. ಪತ್ರಿಕಾ ರಂಗದವರ ಇವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದಿಂದ ಹಾಗೂ ಸಮಾಜದಿಂದ ಆಗಬೇಕಿದೆ’ ಎಂದು ಹೇಳಿದರು.

ಹಲವು ಕಥೆಗಳ ಮೂಲಕ ವಿಶಿಷ್ಟ ಶೈಲಿಯಲ್ಲಿ ಮಾತನಾಡಿದ ಲಿಟಲ್ ಸ್ಕಾಲರ್ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ ಅವರ ಮಾತುಗಳು ಮಕ್ಕಳ ಮನೆಗೆದ್ದವು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ (ದಕ್ಷಿಣ ಕನ್ನಡ), ಬಿ.ಆರ್.ಸವಿತಾ ರೈ (ಕೊಡಗು), ಕಾರ್ಯಕ್ರಮದ ಸಂಚಾಲಕ ಟಿ.ಎನ್.ಮಂಜುನಾಥ್, ಸಮಾಜಸೇವಕ ಪಿ.ಎಂ.ಲತೀಫ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.