ಸುಂಟಿಕೊಪ್ಪ: ದ್ವಿತೀಯ ಪಿಯುಸಿಯಲ್ಲಿ ಇಲ್ಲಿನ ಸಂತ ಮೇರಿ ಆಂಗ್ಲ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಡಿಂಪಲ್ ತಮ್ಮಯ್ಯ ವಾಣಿಜ್ಯ ವಿಭಾಗದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳ ಪೈಕಿ 7 ಮಂದಿ ಉನ್ನತ ಶ್ರೇಣಿ, 29 ಪ್ರಥಮ ಶ್ರೇಣಿ, 6 ಮಂದಿ ದ್ಚಿತೀಯ ಶ್ರೇಣಿ ಮತ್ತು ಮೂವರು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಿ.ಎನ್. ಡಿಂಪಲ್ ತಮ್ಮಯ್ಯ 591( ಶೇ 98.05), ಡಿ.ಡಿ. ಸೃಜನ 587(97.83) ಅಂಕಗಳನ್ನು ಪಡೆದಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜು:
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 59 ವಿದ್ಯಾರ್ಥಿಗಳ ಪೈಕಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 81.35ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಷಯದಲ್ಲಿ 16ರ ಪೈಕಿ 12 (ಶೇ 75) ವಾಣಿಜ್ಯ ವಿಷಯದಲ್ಲಿ 27ರ ಪೈಕಿ 22 (ಶೇ 81.48), ಕಲಾ ವಿಷಯದಲ್ಲಿ 16 ವಿದ್ಯಾರ್ಥಿಗಳಲ್ಲಿ 14 (ಶೇ 87.05) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಉನ್ನತ ಶ್ರೇಣಿ, 32 ಪ್ರಥಮ, 8 ಮಂದಿ ದ್ವಿತೀಯ ಹಾಗೂ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಚೆನ್ನಮ್ಮ ಕಾಲೇಜು:
ಸಮೀಪದ ಮಾದಾಪುರ ಶ್ರೀಮತಿ ಡಿ.ಚೆನ್ಬಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಹಾಜರಾದ 67 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 80.03 ಫಲಿತಾಂಶ ಲಭಿಸಿದೆ. ಉನ್ನತ ಶ್ರೇಣಿಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದು,
ವಾಣಿಜ್ಯ ವಿಭಾಗದ ಎ.ಕೆ. ಸರಸ್ವತಿ 554, ಗರಗಂದೂರು ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ 78 ವಿದ್ಯಾರ್ಥಿಗಳ ಪೈಕಿ 76 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 17, 58 ಪ್ರಥಮ ದರ್ಜೆ, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಪೈಕಿ ಟಿ.ಪಿ. ಶ್ರೇಯಸ್ 583 ಅಂಕಗಳನ್ಬು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.