
ಪ್ರಜಾವಾಣಿ ವಾರ್ತೆ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಸುಗ್ಗಿ ಹಬ್ಬ ಪುತ್ತರಿ (ಹುತ್ತರಿ) ಸಂಭ್ರಮ ಗರಿಗೆದರಿತು.
ತಾಲ್ಲೂಕಿನ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮೊದಲಿಗೆ ನೆರೆ ಕಟ್ಟುವುದು, ಕದಿರು ತೆಗೆಯುವುದು ಸೇರಿದಂತೆ ವಿವಿಧ ಆಚರಣೆಗಳು ನಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಬಾಣಬಿರುಸುಗಳನ್ನು ಹಾರಿ ಬಿಟ್ಟು ಜನ ಸಂಭ್ರಮಿಸಿದರು.
ನಂತರ, ಎಲ್ಲೆಡೆ ಭತ್ತದ ಕದಿರು ತೆಗೆದು ಪೂಜಿಸಿ ಹಬ್ಬವನ್ನು ಆಚರಿಸಿದರು.
ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿಯೂ ಭತ್ತದ ಗದ್ದೆಯನ್ನು ಪೂಜಿಸಿ, ನಿಗದಿತ ವೇಳೆಯಲ್ಲಿ ಕದಿರು ತೆಗೆದು, ಭಕ್ತರಿಗೆ ವಿತರಿಸಲಾಯಿತು.
ಹಬ್ಬದ ಸಂಭ್ರಮ ಶುಕ್ರವಾರವೂ ಇರಲಿದ್ದು, ಹಲವೆಡೆ ಕೋಲಾಟ ಸೇರಿದಂತೆ ವಿವಿಧ ಜನಪದೀಯ ಆಚರಣೆಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.