ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರಿನಲ್ಲಿ ಅತ್ಯಧಿಕ ಮಳೆ 8 ಸೆಂ.ಮೀ ನಷ್ಟು ಸುರಿದಿದೆ. ಶಿರಂಗಾಲ 7, ಸುಂಟಿಕೊಪ್ಪ 5, ಕಂಬಿಬಾಣೆಯಲ್ಲಿ 4.5 ಸೆಂ.ಮೀ ಮಳೆಯಾಗಿದೆ.
ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆಯಲ್ಲಿ 5.5, ಪೊನ್ನಂಪೇಟೆಯ ಕುಟ್ಟದಲ್ಲಿ 5, ಕೆ.ಬಾಡಗ 4, ಮಡಿಕೇರಿ ನಗರದಲ್ಲಿ 3.5, ತಾಲ್ಲೂಕಿನ ಅರೆಕಾಡು ಗ್ರಾಮದಲ್ಲಿ 3 ಸೆಂ.ಮೀ ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.