ADVERTISEMENT

ಶನಿವಾರಸಂತೆ: ಬಿರುಸಿನ ಗಾಳಿಗೆ ಹಾರಿ ಹೋದ ಶಾಲೆಯ ಹೆಂಚುಗಳು

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 16:00 IST
Last Updated 17 ಜುಲೈ 2024, 16:00 IST
ಶನಿವಾರಸಂತೆ ಸಮೀಪದ ಮಾಲಂಬಿ ಗ್ರಾಮದ ಸರ್ಕಾರಿ ಶಾಲೆಯ ಹೆಂಚುಗಳು ಬುಧವಾರ ಬೀಸಿದ ಗಾಳಿಗೆ ಹಾರಿ ಹೋದವು.
ಶನಿವಾರಸಂತೆ ಸಮೀಪದ ಮಾಲಂಬಿ ಗ್ರಾಮದ ಸರ್ಕಾರಿ ಶಾಲೆಯ ಹೆಂಚುಗಳು ಬುಧವಾರ ಬೀಸಿದ ಗಾಳಿಗೆ ಹಾರಿ ಹೋದವು.   

ಶನಿವಾರಸಂತೆ: ಹೋಬಳಿಯಾದ್ಯಂತ ಮಳೆ, ಗಾಳಿ ತೀವ್ರವಾಗಿದೆ. ಬುಧವಾರ ಮಧ್ಯಾಹ್ನ ಮಾಲಂಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 150ಕ್ಕಿಂತ ಹೆಚ್ಚಿನ ಹೆಂಚುಗಳು ಹಾರಿ ಹೋಗಿವೆ.

ಇಲ್ಲಿ ಒಂದು ವಾರದಿಂದ ಬಾರಿ ಮಳೆಯಾಗುತ್ತಿದ್ದು, ಮಾಲಂಬಿ ಶಾಲಾ ಹಿಂಭಾಗದ ಗೋಡೆ ಮಳೆಗೆ ಸೋರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕ ಎದುರಿಸುತ್ತಿದ್ದಾರೆ. ಬುಧವಾರ ಶಾಲೆಗೆ ರಜೆ ಇದ್ದಿದ್ದರಿಂದ ಅನಾಹುತ ತಪ್ಪಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT