ADVERTISEMENT

ದಕ್ಷಿಣ ಕೊಡಗಿನಲ್ಲಿ ಭಾರಿ ಮಳೆ

ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ, ಜಿಲ್ಲಾಡಳಿತದ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 12:58 IST
Last Updated 4 ಆಗಸ್ಟ್ 2019, 12:58 IST

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದೆ. ಆಶ್ಲೇಷ ಮಳೆ ಚುರುಕು ಪಡೆದಿದೆ. ಶನಿವಾರ ಸಂಜೆಯಿಂದಲೂ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳು ಮೈದುಂಬಿಕೊಂಡಿವೆ.

ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಕೊಟ್ಟಂಮುಡಿ, ಚೇರಂಬಾಣೆ, ಬೆಟ್ಟಗೇರಿ, ಪಾಲೂರು, ಅಪ್ಪಂಗಳ, ಬಕ್ಕ, ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಶಾಂತಳ್ಳಿ, ಕರಿಕೆ, ಕುಟ್ಟ, ಮಾಕುಟ್ಟ ಭಾಗದಲ್ಲಿ ನಿರಂತರ ಸುರಿಯುತ್ತಿದ್ದು, ಕೆಲವು ಗದ್ದೆಗಳು ಜಲಾವೃತ್ತವಾಗಿದೆ. ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ, ಮಾದಾಪುರ, ಕಾಲೂರು, ಗಾಳಿಬೀಡು ಶನಿವಾರ ರಾತ್ರಿಯಿಂದ ಸಾಧಾರಣ ಮಳೆಯಾಗುತ್ತಿದೆ.

ಬ್ರಹ್ಮಗಿರಿ, ಪುಷ್ಪಗಿರಿ ತಪ್ಪಲಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿ, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಕೊಂಚ ಏರಿಕೆಯಾಗಿದೆ.

ADVERTISEMENT

ಜಿಲ್ಲೆಯ ಮಳೆ ವಿವರ: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 39.53 ಮಿ.ಮೀ ಮಳೆಯಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 59.4 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 50.2 ಮಿ.ಮೀ, ಸೋಮವಾರಪೇಟೆ ತಾಲ್ಲೂಕಿನಲ್ಲಿ 9 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ:ಮಡಿಕೇರಿ ಕಸಬಾ 34, ನಾಪೋಕ್ಲು 31.2, ಸಂಪಾಜೆ 22, ಭಾಗಮಂಡಲ 150.4, ವಿರಾಜಪೇಟೆ ಕಸಬಾ 68.8, ಹುದಿಕೇರಿ 48.6, ಶ್ರೀಮಂಗಲ 28.2, ಪೊನ್ನಂಪೇಟೆ 109.6, ಅಮ್ಮತ್ತಿ 22, ಬಾಳೆಲೆ 24.1, ಸೋಮವಾರಪೇಟೆ ಕಸಬಾ 6.2, ಶನಿವಾರಸಂತೆ 8.2, ಶಾಂತಳ್ಳಿ 12.2, ಕೊಡ್ಲಿಪೇಟೆ 11.4, ಕುಶಾಲನಗರ 4.2, ಸುಂಟಿಕೊಪ್ಪ 12.2 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.