
ಕುಶಾಲನಗರ: ‘ಭಾರತ ದೇಶ ಹಿಂದೂ ಧರ್ಮದ ತಳಹದಿಯ ಮೇಲೆ ನಿಂತಿದೆ. ಇಡೀ ವಿಶ್ವವೇ ದೇಶದ ಸಂಸ್ಕೃತಿ ಧರ್ಮಕ್ಕೆ ಗೌರವ ನೀಡುತ್ತಿದೆ. ದೇಶದ ಸಂಸ್ಕೃತಿ, ಧರ್ಮ ಉಳಿಸಲು ಎಲ್ಲರ ಸಹಕಾರ ಮುಖ್ಯ’ ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಿರುಗುಪ್ಪೆ ಗ್ರಾಮದಲ್ಲಿ ಭದ್ರಕಾಳಿ, ಭಂಟ, ನಾಗನಕಟ್ಟೆ, ಮಾರಿಯಮ್ಮ ಮತ್ತು ಗುಳಿಗ ದೇವರುಗಳ ಪ್ರತಿಷ್ಠಾಪನಾ ಧಾರ್ಮಿಕ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಹಾಗೂ ಸತ್ಸಂಗಗಳಿಂದ ಗ್ರಾಮಗಳಲ್ಲಿ ಏಕತೆ, ಸಾಮರಸ್ಯ ಮೂಡುತ್ತದೆ ಎಂದರು.
ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, 1200 ವರ್ಷಗಳ ಹಿಂದಿನ ಗಂಗರಾಜನ ಕಾಲದ ಶಾಸನ ಅರಿಶಿಣಗುಪ್ಪೆಯಲ್ಲಿದ್ದು ಧಾರ್ಮಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಇರುವ ಗ್ರಾಮವಾಗಿದೆ ಎಂದರು.
ಸಿದ್ದಲಿಂಗಪುರದ ಮಂಜುನಾಥ ದೇವಾಲಯದ ಮುಖ್ಯಸ್ಥ ರಾಜೇಶ್ ನಾಥ್ ಗುರೂಜಿ ಆಶೀರ್ವಚನ ನೀಡಿದರು.
ದೇವಾಲಯದ ಅರ್ಚಕ ಉರುಂಡೆ ಅಶೋಕ್, ತೊರೆನೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಪ್ರಕಾಶ್, ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ದೇವರಾಜು, ಎಂ.ಟಿ.ಬೇಬಿ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್, ನಿರ್ದೇಶಕ ಹೆಚ್.ಟಿ.ಕುಶಾಲಪ್ಪ, ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎಸ್.ಶಶಿಕುಮಾರ್, ಹೆಬ್ಬಾಲೆಯ ಉದ್ಯಮಿ ನಟೇಶ್ ಗೌಡ, ಅಳುವಾರದಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಎ.ಎನ್.ರಮೇಶ್,
ಬಿ.ಪಿ.ಹರೀಶ್ ಕುಮಾರ್, ಗ್ರಾ.ಪಂ. ಸದಸ್ಯ ಕೆ.ಬಿ.ದೇವರಾಜು, ಮಾಜಿ ಸದಸ್ಯರಾದ ಪಿ.ಡಿ.ರವಿಕುಮಾರ್, ಯೋಗಿಣಿ ಬೆಳ್ಳಿಯಪ್ಪ, ಮಾಜಿ ಯೋಧ ಧನಂಜಯ, ಬಸಿರು ಗುಪ್ಪೆ ಬಸವೇಶ್ವರ ದೇವಾಲಯ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಧನಂಜಯ, ಗೌರವಾಧ್ಯಕ್ಷ ಆನಂದ್, ಉಪಾಧ್ಯಕ್ಷ ಟಿ.ಸಿ.ಮೋಹನ್, ಕಾರ್ಯದರ್ಶಿ ಹೆಚ್.ಆರ್.ಉದಯಕುಮಾರ್, ಪದಾಧಿಕಾರಿಗಳಾದ ಗುರುಪ್ರಸಾದ್, ಕುಶನ್ ಕುಮಾರ್, ಶಿವಕುಮಾರ್, ಸತೀಶ್ ಕುಮಾರ್, ವಿನೋದ್ ಕುಮಾರ್ ಪಾಲ್ಗೊಂಡಿದ್ದರು.
ಶಿಕ್ಷಕಿ ಎನ್.ಕೆ.ಜಯಶ್ರೀ ಸ್ವಾಗತಿಸಿದರು. ಶಿಕ್ಷಕ ಬಸವರಾಜು ನಿರೂಪಿಸಿದರು. ದೇವಾಲಯ ನಿರ್ಮಾಣದಲ್ಲಿ ಶ್ರಮಿಸಿದ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
‘ಪ್ಲಾಸ್ಟಿಕ್ ಬಳಕೆ ನಿಷೇಧವಾಗಲಿ’
‘ಹಳ್ಳಿಗಳಲ್ಲಿ ರೈತರ ಕೃಷಿ ಚಟುವಟಿಕೆಗಳು ನಿರ್ವಿಘ್ನವಾಗಿ ಸಾಗಲು ಕಾಲಕಾಲಕ್ಕೆ ಮಳೆ ಬೆಳೆ ಆಗಲು ದೇವರ ಕೃಪೆ ಅಗತ್ಯ. ಭಾರತೀಯರು ಪ್ರಕೃತಿಯ ಆರಾಧಕರು. ನೀರು ಮರ ಗಿಡ ನದಿಗಳು ನಮ್ಮನ್ನು ಪೊರೆಯುತ್ತಿವೆ.ಹಾಗೆಯೇ ಭೂಮಿಗೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು.ಈ ಕಾರ್ಯ ಗ್ರಾಮಗಳ ಪ್ರತಿ ಮನೆಗಳಿಂದಲೇ ಆರಂಭವಾಗಲಿ’ ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.