ಸೋಮವಾರಪೇಟೆ: ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಯನ್ನು ಸ್ಥಳೀಯರು ಶ್ರಮದಾನದ ಮೂಲಕ ಶನಿವಾರ ದುರಸ್ತಿ ಮಾಡಿದರು.
ಮುಖ್ಯ ರಸ್ತೆಯಿಂದ 11 ಮನೆಗೆ ತೆರಳುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದರಿಂದ, ಜನರು ಹಾಗೂ ವಾಹನಗಳು ಸಂಚರಿಸಲು ಸಮಸ್ಯೆಯಾಗಿತ್ತು. ರಸ್ತೆಯನ್ನು ಸರಿಪಡಿಸಲು ಹಲವು ಭಾರಿ ಸಂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಸ್ಪಂದಿಸಿರಲಿಲ್ಲ.
ಕೊನೆಗೆ ಸ್ಥಳೀಯರು ತಮ್ಮ ಸ್ವಂತ ಖರ್ಚಿನಿಂದ ಸುಮಾರು 1 ಕಿ.ಮೀ. ರಸ್ತೆಯನ್ನು ಜೇಸಿಬಿ ಯಂತ್ರದ ಮೂಲಕ ವೈಟ್ ಮಿಕ್ಸ್ ಹಾಕುವ ಮೂಲಕ ಗುಂಡಿಗಳನ್ನು ಮುಚ್ಚಿ ಸರಿಪಡಿಸಿದರು.
‘ಹಲವಾರು ವರ್ಷಗಳಿಂದ ಪಂಚಾಯಿತಿ ಅಧಿಕಾರಿಗಳಿಗೆ, ಕೂತಿ ವಾರ್ಡ್ ಸದಸ್ಯರಿಗೆ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದೆವು ಆದರೆ, ಯಾವುದೇ ಪ್ರಯೋಜನವಾಗಿಲ್ಲ ಪ್ರತಿ ವರ್ಷ ನಾವೇ ಸ್ವಂತ ಖರ್ಚಿನಿಂದ ರಸ್ತೆ ಸರಿಪಡಿಸುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿ ಜಿತೇಂದ್ರ ತಿಳಿಸಿದರು. ಶ್ರಮದಾನದಲ್ಲಿ ಸ್ಥಳೀಯರಾದ ಬೋಪ್ಪಯ್ಯ, ಅಶ್ವಥ್, ಅಶೋಕ್, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.