ADVERTISEMENT

ಕೊಡಗು: ನಾಲ್ಕರ ಹಂತಕ್ಕೆ ‘ರಾಯಲ್ಸ್’, ‘ಫ್ರೆಂಡ್ಸ್’ ತಂಡ

ಕೊಡಗು ಚಾಂಪಿಯನ್ಸ್ ಲೀಗ್‌ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 17:00 IST
Last Updated 4 ಏಪ್ರಿಲ್ 2021, 17:00 IST
ಕೆ.ಸಿ.ಎಲ್ ಟೂರ್ನಿಯಲ್ಲಿ ರ್‍ಯಾಂಬೋ ಕ್ರಿಕೆಟರ್ಸ್ ಹಾಗೂ ಕ್ರಿಯೇಟಿವ್ ಕ್ರಿಕೆಟರ್ಸ್ ತಂಡಗಳ ನಡುವಿನ ಪಂದ್ಯ
ಕೆ.ಸಿ.ಎಲ್ ಟೂರ್ನಿಯಲ್ಲಿ ರ್‍ಯಾಂಬೋ ಕ್ರಿಕೆಟರ್ಸ್ ಹಾಗೂ ಕ್ರಿಯೇಟಿವ್ ಕ್ರಿಕೆಟರ್ಸ್ ತಂಡಗಳ ನಡುವಿನ ಪಂದ್ಯ   

ಸಿದ್ದಾ‍‍ಪುರ: ಕೊಡಗು ಚಾಂಪಿಯನ್ಸ್ ಲೀಗ್‌ನ (ಕೆಸಿಎಲ್‌) ಎ ಗುಂಪಿನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಜಯ ಸಾಧಿಸಿರುವ ರಾಯಲ್ಸ್ ವಿರಾಜಪೇಟೆ ತಂಡ ಅಗ್ರ ಸ್ಥಾನ ಪಡೆದಿದ್ದು, ಐದು ಪಂದ್ಯದಲ್ಲಿ ನಾಲ್ಕು ಪಂದ್ಯಗಳನ್ನು ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ಗೆದ್ದು, ಅಂತಿಮ ನಾಲ್ಕರ ಹಂತಕ್ಕೆ ಅರ್ಹತೆ ಪಡೆದಿದೆ.

ಫ್ರೆಂಡ್ಸ್ ಹಾಗೂ ಕ್ರಿಯೇಟಿವ್ ತಂಡಗಳ‌ ನಡುವಿನ ಪಂದ್ಯದಲ್ಲಿ ಮೊದಲಿಗೆ ಬ್ಯಾಟ್ ಮಾಡಿದ ಫ್ರೆಂಡ್ಸ್ ತಂಡ 6 ಓವರ್‌ಗಳಲ್ಲಿ 63 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕ್ರಿಯೇಟಿವ್ ತಂಡ 44 ರನ್‌ ಗಳಿಸಿ ಸೋಲನುಭವಿಸಿತು.

ಎರಡನೇ ಪಂದ್ಯದಲ್ಲಿ ‘ಟೀಂ ಕೊಂಬನ್’ ತಂಡ ನೀಡಿದ 66 ರನ್‌ಗಳ ಗುರಿ ಬೆನ್ನಟ್ಟಿದ ರೆಡ್ ಬ್ಯಾಕ್ಸ್ ಸ್ಪೈಡರ್ಸ್ ತಂಡ 5.1 ಓವರ್‌ನಲ್ಲಿ‌ ಗುರಿ‌ ಮುಟ್ಟಿತು.

ADVERTISEMENT

ರಾಯಲ್ಸ್ ನೀಡಿದ 79 ರನ್‌ಗಳ ಗುರಿ ಬೆನ್ನಟ್ಟಿದ ರ್‍ಯಾಂಬೋ ಕ್ರಿಕೆಟರ್ಸ್ ತಂಡ, 77 ರನ್ ಗಳಿಸಿ ಅಂತಿಮ ಕ್ಷಣದಲ್ಲಿ ಎಡವಿತು.
ಫ್ರೆಂಡ್ಸ್ ಹಾಗೂ ರೆಡ್ ಬ್ಯಾಕ್ಸ್ ನಡುವಿನ ಪಂದ್ಯದಲ್ಲಿ ಫ್ರೆಂಡ್ಸ್ ತಂಡ 85 ರನ್ ಗಳಿಸಿದರೆ, ಗೆಲುವಿಗಾಗಿ ಕಣಕ್ಕಿಳಿದು 66 ರನ್ ಗಳಿಸಿ ರೆಡ್ ಬ್ಯಾಕ್ಸ್ ತಂಡ ಸೋಲೊಪ್ಪಿಕೊಂಡಿತು.

ಮತ್ತೊಂದು ಪಂದ್ಯದಲ್ಲಿ ರಾಯಲ್ಸ್ ನೀಡಿದ 72 ರನ್‌ಗಳ ಗುರಿ ಬೆನ್ನಟ್ಟಿದ ಕ್ರಿಯೇಟಿವ್ ತಂಡ 65 ರನ್ ಗಳಿಸಿ ಸೋಲನುಭವಿಸಿತು.
ರ್‍ಯಾಂಬೋ ತಂಡ ನೀಡಿದ 61 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಕೊಂಬನ್ ತಂಡ 5.4 ಓವರ್‌ನಲ್ಲಿ ಗೆಲುವಿನ ದಡ ಸೇರಿತು. ಫ್ರೆಂಡ್ಸ್ ತಂಡ 5 ವಿಕೆಟ್ ಕಳೆದುಕೊಂಡು 46 ಗಳಿಸಿದರೆ, 5.2 ಓವರ್‌ನಲ್ಲಿ ರಾಯಲ್ಸ್ ತಂಡ ಗುರಿ ಮುಟ್ಟಿ ಗೆಲುವು ಸಾಧಿಸಿತು.

‘ಟೀಮ್ ಕೊಂಬನ್’ ತಂಡ ನೀಡಿದ 30 ರನ್‌ಗಳ ಗುರಿಯನ್ನು ಫ್ರೆಂಡ್ಸ್ ತಂಡ 7 ಓವರ್‌ನಲ್ಲಿ ತಲು‍ಪಿ ಸುಲಭ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.