ADVERTISEMENT

ಸಂವಿಧಾನದ ಆಶಯ ಅರಿಯಿರಿ

ನಂಜರಾಯಪಟ್ಟಣ : ಕ್ರೀಡಾಕೂಟ ಸಮಾರೋಪ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:59 IST
Last Updated 1 ಫೆಬ್ರುವರಿ 2026, 6:59 IST
<div class="paragraphs"><p>ಕುಶಾಲನಗರ ಸಮೀಪದ ನಂಜರಾಯಪಟ್ಟಣ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟ‌ದ ಸಮಾರೋಪ ಸಮಾರಂಭದಲ್ಲಿ</p></div>

ಕುಶಾಲನಗರ ಸಮೀಪದ ನಂಜರಾಯಪಟ್ಟಣ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟ‌ದ ಸಮಾರೋಪ ಸಮಾರಂಭದಲ್ಲಿ

   

ಕುಶಾಲನಗರ: ನಂಜರಾಯಪಟ್ಟಣ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ‌ದ ಸಮಾರೋಪ ಸಮಾರಂಭ ನಡೆಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ‘ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅರಿತುಕೊಂಡು  ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಕ್ರೀಡಾಕೂಟಗಳಿಗೆ ಹೆಸರಾದ ನಂಜರಾಯಪಟ್ಟಣ ಯಾವುದೇ ಧರ್ಮ, ಜಾತಿಗೆ ಸೀಮಿತವಾದ ಕ್ರೀಡಾಕೂಟ ಹಮ್ಮಿಕೊಳ್ಳದೆ ಸರ್ವ ಧರ್ಮೀಯರ, ಸಮುದಾಯದವರ ಸಮ್ಮಿಲನಕ್ಕೆ ಸಾಕ್ಷಿಯಾಗುವ ಚಟುವಟಿಕೆ ಹಮ್ಮಿಕೊಳ್ಳುತ್ತಾ ಬರುವ ಮೂಲಕ ಸಾಮರಸ್ಯ‌ ಮಹತ್ವ ಸಾರುತ್ತಿದ್ದಾರೆ’ ಎಂದರು.

ADVERTISEMENT

ಸಿ.ಎಲ್.ವಿಶ್ವ, ಟಿ.ಕೆ.ಸೋಮನ್, ಟಿ.ಕೆ.ರಘು, ಸಚಿನ್ ನಿಂಬಾಳ್ಕರ್, ಹಡ್ಳಳ್ಳಿ ರುದ್ರಪ್ಪ, ರೇಣುಕಾ ಪ್ರೇಮಾನಂದ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾಕೂಟ ಅಂಗವಾಗಿ ನಡೆದ ಲಕ್ಕಿ ಡಿಪ್ ವಿಜೇತರಿಗೆ 5 ಕೆ.ಜಿ. ಕೋಳಿ ವಿತರಿಸಲಾಯಿತು. ಶಾಲಾ ಶಿಕ್ಷಕಿ ಮೀನಾಕ್ಷಿ ವಾರ್ಷಿಕ ಶಾಲಾ ವರದಿ ವಾಚಿಸಿದರು. ಕ್ರೀಡಾಕೂಟ ವಿಜೇತರಿಗೆ‌ ಬಹುಮಾನ ವಿತರಿಸಲಾಯಿತು.

ನಂಜರಾಯಪಟ್ಟಣ ಗ್ರಾಪಂ ಉಪಾಧ್ಯಕ್ಷೆ ಕುಸುಮಾ, ಸದಸ್ಯೆ ಸಮೀರಾ, ಎಸ್‌ಡಿಎಂಸಿ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷೆ ಮಿನಿ,‌ ಹಳೆ ವಿದ್ಯಾರ್ಥಿಗಳಾದ ಕೆದಂಬಾಡಿ ಚೇತನ್, ಕಾಳಯ್ಯ, ರವಿ ಬೆಳ್ಯಪ್ಪ, ಮಾಜಿ ಸೈನಿಕ‌ ಮುಸ್ತಾಫ, ಡಿ.ಆರ್.ಎಫ್.ಒ ಸಚಿನ್ ನಿಂಬಾಳ್ಕರ್, ಇಸಿಒ ಯಾದಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಮುಖ್ಯ ಶಿಕ್ಷಕಿ ಸರಳಾ ರಾಣಿ, ದಾನಿಗಳಾದ ಗಣಪತಿ, ಅಮೀರ್, ಕೋಟುಮಾಡ ಪವನ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಾಥ್ಯು, ಖಜಾಂಚಿ ಹ್ಯಾರಿಸ್,‌ ಗ್ರಾಮ ಪಂ‌ಚಾಯಿತಿ ಮಾಜಿ ಸದಸ್ಯ ಸುಮೇಶ್ ‌ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.