ಸುಂಟಿಕೊಪ್ಪದ ಮಾರುಕಟ್ಟೆ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ಕಾಫಿ ವರ್ಕ್ಸ್ ಗೆ ಕಳ್ಳರು ನುಗ್ಗಿ ನಗದು ದೋಚ್ಚಿದ್ದಾರೆ
ಸುಂಟಿಕೊಪ್ಪ: ಇಲ್ಲಿನ ಮಾರುಕಟ್ಟೆ ರಸ್ತೆಯಲ್ಲಿರುವ 2 ಅಂಗಡಿಗೆ ಬುಧವಾರ ರಾತ್ರಿ ನುಗ್ಗಿದ ಕಳ್ಳರು ನಗದು ಹಾಗೂ ಮೊಬೈಲ್ ಅನ್ನು ಕದ್ದು ಪರಾರಿಯಾಗಿದ್ದಾರೆ.
ಇಲ್ಲಿನ ಚಾಮುಂಡೇಶ್ವರಿ ಕಾಫಿ ವರ್ಕ್ಸ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು ₹ 5000 ಹಾಗೂ ಬ್ಯಾಂಕ್ ಖಾತೆಯ ಪುಸ್ತಕವನ್ನು ಕದ್ದಿದ್ದಾರೆ. ಅಲ್ಲದೇ ಅದೇ ರಸ್ತೆಯಲ್ಲಿರುವ ವೇದ ಡ್ರೈವಿಂಗ್ ಶಾಲೆಯ ಕಚೇರಿಗೆ ನುಗ್ಗಿ ಗಲ್ಲಾ ಪೆಟ್ಟಿಗೆಯನ್ನು ತೆರೆಯಲು ವಿಫಲರಾಗಿದ್ದು ಅಲ್ಲೇ ಇದ್ದ ಕಚೇರಿಯ ಮೊಬೈಲ್ ಅನ್ನು ಕದ್ದು ಪರಾರಿಯಾಗಿದ್ದಾರೆ.
ಅಂಗಡಿಗಳ ಮಾಲೀಕರು ಗುರುವಾರ ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ಬೀಗ ಒಡೆದಿರುವುದು ಗೊತ್ತಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.