
ಸಿದ್ದಾಪುರ: ‘ಲವ್ ಜಿಹಾದ್, ಲ್ಯಾಂಡ್ ಜಿಹಾದ್ ವಿರುದ್ಧ ಹಿಂದೂ ಸಮಾಜ ಜಾಗೃತರಾಗಬೇಕು’ ಎಂದು ಪುತ್ತೂರಿನ ಮಾತೃ ಸುರಕ್ಷ ಸಮಿತಿಯ ಪ್ರಮುಖ ಗಣರಾಜ್ ಭಟ್ ಸಲಹೆ ನೀಡಿದರು.
ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ನಡೆದ ಲವ್ ಜಿಹಾದ್ ವಿರುದ್ಧದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿ, ‘ಲವ್ ಜಿಹಾದ್ ಹಾಗೂ ಲ್ಯಾಂಡ್ ಜಿಹಾದ್‌ಗೆ ಕೇರಳದಿಂದ ಆರ್ಥಿಕ ನೆರವು ದೊರೆಯುತ್ತಿದ್ದು, ಜನರು ಜಾಗೃತರಾದರೆ ಮತಾಂತರವನ್ನು ತಡೆಯಬಹುದು’ ಎಂದರು.
‘ಹಣೆಯಲ್ಲಿ ತಿಲಕವನ್ನಿಟ್ಟವರ ಭಾಷಣದಲ್ಲಿ ದ್ವೇಷವನ್ನು ಹುಡುಕಿ ಪ್ರಕರಣದಾಖಲಿಸುವ ಸರ್ಕಾರ, ಲವ್ ಜಿಹಾದ್ ಬಗ್ಗೆ ಮೌನ ವಹಿಸುತ್ತಿದೆ. ನಮ್ಮ ಮನೆಯ ಹೆಣ್ಣುಮಕ್ಕಳ ರಕ್ಷಣೆಗೆ ನಾವು ಬದ್ಧರಾದರೆ ಮಾತ್ರ ಲವ್ ಜಿಹಾದ್ ವಿರುದ್ಧ ಹೋರಾಡಲು ಸಾಧ್ಯ. ಹಿಂದೂ ಸುರಕ್ಷಾ ಸಮಿತಿ ಜಾಗೃತಿ ಯಾತ್ರೆ ಪ್ರತಿಯೊಂದು ಗ್ರಾಮಗಳಿಗೆ ತಲುಪುವಂತಾಗಬೇಕು’ ಎಂದು ಸಲಹೆ ನೀಡಿದರು.
ಹಿಂದೂ ಸುರಕ್ಷಾ ಸಮಿತಿ ಪ್ರಮುಖ ಕುಕ್ಕೇರ ಅಜಿತ್ ಮಾತನಾಡಿ, ‘ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡುವ ಕೆಲಸ ನಡೆಯುತ್ತಿದ್ದು, ಹಿಂದೂಗಳು ಜಾಗೃತರಾಗಬೇಕು. ಕೊಡಗಿನಲ್ಲಿ ಇಸ್ಲಾಮೀಕರಣದ ಭಾಗವೇ ಲವ್ ಜಿಹಾದ್’ ಎಂದು ಅವರು ಅರೋಪಿಸಿದರು.
‘ಹಿಂದೂ ಹೆಣ್ಣು ಮಕ್ಕಳನ್ನು ದೈಹಿಕವಾಗಿ ಬಳಸಿ ಬೆದರಿಕೆಯೊಡ್ಡಿದ ಕಿಡಿಗೇಡಿಯ ಫೋಟೋ ಬಿಡುಗಡೆ ಮಾಡದಿರುವುದು ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ಸಂಶಯಕ್ಕೆ ಎಡೆ ಮಾಡಿದೆ’ ಎಂದು ಆರೋಪಿಸಿದರು.
ಸಮಿತಿಯ ಪ್ರಮುಖರಾದ ಅನಿತಾ ಪೂವಯ್ಯ ಮಾತನಾಡಿ, ‘ಹಿಂದೂ ಹೆಣ್ಣು ಮಕ್ಕಳು ಮತಾಂತರಗೊಂಡ ನಂತರ ದೈಹಿಕವಾಗಿ , ಮಾನಸಿಕವಾಗಿ ಅನ್ಯಾಯಕ್ಕೆ ಒಳಗಾಗಿದ್ದಾರೆ. ಪ್ರತಿಯೊಂದು ಮನೆಯಲ್ಲೂ ತಮ್ಮ ಹೆಣ್ಣು ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು’ ಎಂದರು.
ವೇದಿಕೆಯಲ್ಲಿ ಕಮಾಂಡರ್ ಕೆ.ಎ. ಉತ್ತಪ್ಪ, ಪುದಿಯೊಕ್ಕಡ ರಮೇಶ್, ಆರ್.ಕೆ ಚಂದ್ರು, ಮಾಜಿ ಸಚಿವರಾದ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ, ಬಿಜೆಪಿ ಮುಖಂಡ ವಿ.ಕೆ. ಲೊಕೇಶ್ ಹಾಜರಿದ್ದರು.
ಜಾಗೃತಿ ಸಮಾವೇಶದ ಅಂಗವಾಗಿ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದಿಂದ ವಿವಿಧ ಘೋಷಣೆಯ ಮೂಲಕ ಹಿಂದೂ ಸುರಕ್ಷಸಮಿತಿಯು ಮುಖ್ಯ ರಸ್ತೆಯ ಮೂಲಕ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಜಮಾಯಿಸಿದರು. ಡಿ.ವೈ.ಎಸ್.ಪಿ ಸೂರಜ್, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.
ಜಾಗೃತಿ ಸಮಾವೇಶದ ಅಂಗವಾಗಿ ಮೆರವಣಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಹಿಂದೂ ಸುರಕ್ಷಾ ಸಮಿತಿ ಜಾಗೃತಿ ಯಾತ್ರೆ ಗ್ರಾಮಗಳಿಗೆ ತಲುಪಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.