ADVERTISEMENT

ಸಿದ್ದಾಪುರ | ನೆಲ್ಯಹುದಿಕೇರಿ ಮುತ್ತಪ್ಪ ದೇವಾಲಯದ ಉತ್ಸವ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:55 IST
Last Updated 27 ಫೆಬ್ರುವರಿ 2026, 7:55 IST
ಶ್ರೀ ಮುತ್ತಪ್ಪ ಹಾಗೂ ತಿರುವಪ್ಪನ ವೆಳ್ಳಾಟಂ
ಶ್ರೀ ಮುತ್ತಪ್ಪ ಹಾಗೂ ತಿರುವಪ್ಪನ ವೆಳ್ಳಾಟಂ   

ಸಿದ್ದಾಪುರ: ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.

ಮುತ್ತಪ್ಪ ವೆಳ್ಳಾಟಂ, ಶಾಸ್ತಪ್ಪನ, ಗುಳಿಗನ ತೆರೆ, ತಿರುವಪ್ಪನ, ವಸೂರಿಮಾಲಾ ದೇವಿಯ ತೆರೆ, ಭಗವತಿ ತೆರೆಗಳು ನಡೆದವು. ಎರಡು ದಿನ ನಡೆದ ಪೂಜಾ ಕಾರ್ಯಕ್ರಮಗಳಿಗೆ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ತೆರೆ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಿದ್ದಾಪುರದ ನೆಲ್ಲಿಹುದಿಕೇರಿ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವದಲ್ಲಿ ಭಗವತಿಯ ತೆರೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT