
ಪ್ರಜಾವಾಣಿ ವಾರ್ತೆ
ಸಿದ್ದಾಪುರ: ಕಾಫಿ ತೋಟದ ಲೈನ್‌ಮನೆಯಿಂದ ಕಾಣೆಯಾಗಿದ್ದ ವೃದ್ಧೆ ಮೃತದೇಹ ಕರಡಿಗೋಡು ಗ್ರಾಮದ ಕಾವೇರಿ ನದಿಯಲ್ಲಿ ಮಂಗಳವಾರ ಪತ್ತೆಯಾಗಿದೆ.
ಗ್ರಾಮದ ಭುವನಳ್ಳಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿರುವ ನಂಜನಗೂಡಿನ ನಿವಾಸಿ ಕಾಂತರಾಜ್ ಅವರ ತಾಯಿ ಸಿದ್ದಮ್ಮ (80) ಡಿ.25 ರಂದು ಕಾಣೆಯಾಗಿದ್ದರು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರಡಿಗೋಡು ಗ್ರಾಮಸ್ಥರಿಗೆ ನದಿಯಲ್ಲಿ ಮಂಗಳವಾರ ಮೃತದೇಹ ಕಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆಯಲ್ಲಿ ಸಿದ್ದಮ್ಮ ಎಂಬುದು ದೃಢಪಟ್ಟಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.