ADVERTISEMENT

ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿ ಒಂಟಿ ಸಲಗನ ಸಂಚಾರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 14:18 IST
Last Updated 29 ನವೆಂಬರ್ 2019, 14:18 IST
ಶನಿವಾರಸಂತೆ ಸಮೀಪದ ನಿಲುವಾಗಿಲು-ಬೆಸೂರು ಗ್ರಾಮದ ಶ್ರೀಕ್ಷೇತ್ರ ಬಾಲ ತ್ರಿಪುರಸುಂದರಿ ದೇವಾಲಯ ಆವರಣದಲ್ಲಿ ಸಂಚರಿಸಿದ ಒಂಟಿ ಸಲಗ
ಶನಿವಾರಸಂತೆ ಸಮೀಪದ ನಿಲುವಾಗಿಲು-ಬೆಸೂರು ಗ್ರಾಮದ ಶ್ರೀಕ್ಷೇತ್ರ ಬಾಲ ತ್ರಿಪುರಸುಂದರಿ ದೇವಾಲಯ ಆವರಣದಲ್ಲಿ ಸಂಚರಿಸಿದ ಒಂಟಿ ಸಲಗ   

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿ ಒಂಟಿ ಸಲಗವೊಂದು ಹಲವಾರು ದಿನಗಳಿಂದ ಸಂಚರಿಸುತ್ತಿದ್ದು ಗ್ರಾಮಸ್ಥರಿಗೆ ನಿತ್ಯ ದರ್ಶನ ಭಾಗ್ಯ ಕರುಣಿಸುತ್ತಿದೆ.

ಹೋಬಳಿಯ ಉಂಬಳಿ ಬೆಟ್ಟದಿಂದ ಕಟ್ಟೆಪುರ ಅರಣ್ಯಕ್ಕೆ ಬಂದು ನೆಲೆಸುವ ಸಲಗ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಕೋಣಿಗನಹಳ್ಳಿ, ಬಸವನಾರೆ, ಮನುಗನಹಳ್ಳಿ, ನಿಲುವಾಗಿಲು-ಬೆಸೂರು ಗ್ರಾಮಗಳ ರೈತರ ಗದ್ದೆ, ತೋಟಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ತಿಂದು ಹಾನಿಪಡಿಸುತ್ತಿದೆ. ಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯ ಆವರಣದಲ್ಲಿ ಸಂಚರಿಸುತ್ತಿದ್ದರೂ ಅಲ್ಲಿ ಬರುವ ಭಕ್ತ ಜನರಿಗೆ ತೊಂದರೆ ಕೊಡುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

’ಶ್ರೀಕ್ಷೇತ್ರ ಬಾಲ ತ್ರಿಪುರಸುಂದರಿ ದೇವಾಲಯ ಆವರಣದಲ್ಲಿ ಸಂಚರಿಸುವ ಒಂಟಿ ಸಲಗ ಮನುಷ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಿಲ್ಲ. ಆದರೆ, ಬೆಳೆಹಾನಿ ಮಾಡಿದೆ.ನೀರು, ಆಹಾರಕ್ಕಾಗಿ ಬರುತ್ತಿದೆ. ನಿತ್ಯ ದೇವಾಲಯದ ಮಾರ್ಗದಲ್ಲಿ ಸಂಚರಿಸುತ್ತಿದ್ದು ವಾರ್ಷಿಕೋತ್ಸವದಂದು ಸಹ ಪೂಜಾ ಸಮಯಕ್ಕೆ ಹಾಜರಾಗಿತ್ತು‘ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಮಾಜಿ ಯೋಧ ಸಿ.ಬಿ.ಪ್ರಸನ್ನ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.