ADVERTISEMENT

ಮಗುವಿನ ಶಾಲಾ ಶೂನಲ್ಲಿ ಬೆಚ್ಚಗೆ ಮಲಗಿತ್ತು ಹಾವು!

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 4:08 IST
Last Updated 13 ಜೂನ್ 2019, 4:08 IST
ವಿದ್ಯಾರ್ಥಿನಿ ಶೂನಲ್ಲಿ ಹಾವು
ವಿದ್ಯಾರ್ಥಿನಿ ಶೂನಲ್ಲಿ ಹಾವು   

ಸಿದ್ದಾಪುರ: ಶಾಲೆಗೆ ತೆರಳಲೆಂದು ಶೂ ಧರಿಸಲು ಮುಂದಾದ ಸಂದರ್ಭ ಶೂ ಒಳಗೆ ವಿಷಕಾರಿ ಹಾವೊಂದು ಕಂಡು ವಿದ್ಯಾರ್ಥಿನಿ ಬೆಚ್ಚಿಬಿದ್ದ ಘಟನೆ ಇಲ್ಲಿಯ ಮೈಸೂರು ರಸ್ತೆಯಲ್ಲಿ ನಡೆದಿದೆ.

ಶಂಶುದ್ದೀನ್ ಅವರ ಪುತ್ರಿ ಎಂದಿನಂತೆ ಶಾಲೆಗೆ ಹೊರಡಲು ಸಿದ್ಧವಾಗಿ ಮನೆಯ ಮುಂಭಾಗ ಇಟ್ಟಿದ್ದ ತನ್ನ ಶೂ ತೆಗೆಯಲು ಹೋದಾಗ ಅದರಲ್ಲಿದ್ದ ಹಾವನ್ನು ಕಂಡು ಕಿರುಚಿದ್ದಾಳೆ. ತಂದೆ ಹಾಗೂ ಇತರರು ತಕ್ಷಣ ಬಂದು ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಬಾಲಕಿಯ ‌ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ.

ಮಳೆಗಾಲವಾಗಿದ್ದರಿಂದ ಹಾವು ಹಾಗೂ ವಿಷ ಜಂತುಗಳು ರಾತ್ರಿ ವೇಳೆ ಮನೆಯ ಬಳಿಗೆ ಬೆಚ್ಚನೆಯ ಜಾಗಕ್ಕೆ ಬಂದು ಸೇರುವುದರಿಂದ ಬೆಳಿಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದು ಶಂಶುದ್ದೀನ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.